ಸುದ್ದಿ ಸಂಕ್ಷಿಪ್ತ

‘ಮಹಾವೀರ ಮಹಾ ದರ್ಶನ’ : ವಿಚಾರ ಸಂಕಿರಣ ನಾಳೆ

ಮೈಸೂರು,ಆ.30 : ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು, ಕಲ್ಪವೃಕ್ಷ ಟ್ರಸ್ಟ್ ಜಂಟಿಯಾಗಿ ಡಾ.ಲತಾರಾಜಶೇಖರ್ ಅವರ ‘ಮಹಾವೀರ ಮಹಾದರ್ಶನ’ ಮಹ ಕಾವ್ಯದ ವಿಚಾರ ಸಂಕಿರಣವನ್ನು ನಾಳೆ 1ರ ಸಂಜೆ 5 ಗಂಟೆಗೆ ಅರಮನೆ ಉತ್ತರದ್ವಾರದಲ್ಲಿರುವ ಕಸಾಪ ಸಭಾಂಗಣದಲ್ಲಿ ಆಯೋಜಿಸಲಾಗಿದೆ.

ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ ನಿರ್ದೇಶಕ ಡಾ.ನೀಲಗಿರಿ ತಳವಾರ್ ಉದ್ಘಾಟಿಸುವರು, ಸಾಹಿತಿ ಡಾ.ಭೈರವಮೂರ್ತಿ ಅಧ್ಯಕ್ಷತೆ, ಕೃತಿ ಕುರಿತು ವಿದ್ವಾಂಸ ಮೋಹನ್ ಕುಮಾರ್ ಶಾಸ್ತ್ರಿ ಮಾತನಾಡುವರು, ಜಿಕಸಾಪ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ಡಾ.ಹೆಚ್.ಬಿ.ರಾಜಶೇಖರ್, ಡಾ.ಲತಾರಾಜಶೇಖರ್ ಉಪಸ್ಥಿತರಿರುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: