ದೇಶಪ್ರಮುಖ ಸುದ್ದಿ

ಸಿಬಿಐ ಕೋರ್ಟ್​ ಆದೇಶದಂತೆ ಶರಣಾದ ಲಾಲೂ ಪ್ರಸಾದ್ ಯಾದವ್ ಮತ್ತೆ ಜೈಲಿಗೆ

ದೇಶ(ನವದೆಹಲಿ)ಆ.30:- ಬಹುಕೋಟಿ ಮೇವು ಹಗರಣದಲ್ಲಿ ಜೈಲುಪಾಲಾಗಿದ್ದ  ಆರ್ ಜೆಡಿ ಮುಖ್ಯಸ್ಥ ಲಾಲೂಪ್ರಸಾದ್ ಯಾದವ್ ಜಾಮೀನು ಮೇಲೆ ಚಿಕಿತ್ಸೆಗಾಗಿ ಹೊರಬಂದಿದ್ದರು. ಇದೀಗ ಜಾಮೀನು ಅವಧಿ ಮುಗಿಯುವ ಮುನ್ನವೇ ಮತ್ತೆ ಪೊಲೀಸರಿಗೆ ಶರಣಾಗಿದ್ದಾರೆ.

ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲೂ ಪ್ರಸಾದ್ ಯಾದವ್ ಅವರನ್ನು ಬಿರ್ಸಾ ಮುಂಡ ಸೆಂಟ್ರಲ್  ಜೈಲಿನಲ್ಲಿರಿಸಲಾಗುತ್ತದೆ ಎನ್ನಲಾಗಿದೆ. ಅನಾರೋಗ್ಯದ ಕಾರಣ ವೈದ್ಯಕೀಯ ಜಾಮೀನು ಪಡೆದ ಲಾಲೂ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಮಗನ ವಿವಾಹ ಸಮಾರಂಭದಲ್ಲಿ ಪಾಲ್ಗೊಳ್ಳಲು ನ್ಯಾಯಾಲಯ ಐದು ದಿನಗಳ ಪೆರೋಲ್ ನೀಡಿತ್ತು. ಇದೀಗ ಆರೋಗ್ಯದಲ್ಲಿ ಸುಧಾರಣೆ ಕಂಡು ಬಂದಿದೆ ಎನ್ನಲಾಗುತ್ತಿದೆಯಾದರೂ, ಜೈಲಿನಿಂದ ಮತ್ತೆ ಆಸ್ಪತ್ರೆಗೆ ಹೋಗುತ್ತಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ.  ಕೋರ್ಟ್ ಆ.30ರೊಳಗೆ ಶರಣಾಗಬೇಕು ಎಂದು ಆದೇಶಿಸಿದ ಹಿನ್ನೆಲೆಯಲ್ಲಿ ನ್ಯಾಯಾಲಯದ ಸೂಚನೆಯಂತೆ ಜೈಲಿಗೆ ಪಾಪಸ್ಸಾಗಿದ್ದಾರೆ.  (ಎಸ್.ಎಚ್)

Leave a Reply

comments

Related Articles

error: