
ಮೈಸೂರು
ಸ್ಕೂಟರ್ ಮಾರಾಟ ಮಾಡಲು ಯತ್ನಿಸುತ್ತಿದ್ದವನ ಬಂಧನ
ಕಡಿಮೆ ಬೆಲೆಗೆ ಟಿ.ವಿ.ಎಸ್. ಜ್ಯೂಪಿಟರ್ ಸ್ಕೂಟರನ್ನು ಸಾತಗಳ್ಳಿ ಬಸ್ ಡಿಪೋ ಬಳಿ ಮಾರಾಟ ಮಾಡಲು ಯತ್ನಿಸುತ್ತಿದ್ದ ವ್ಯಕ್ತಿಯೋರ್ವನನ್ನು ಉದಯಗಿರಿ ಪೊಲೀಸರು ಬಂಧಿಸಿದ್ದಾರೆ.
ಬಂಧಿತನನ್ನು ರಮ್ಮನ ಹಳ್ಳಿಯ ಚೆಲುವರಾಜು( 26 )ವರ್ಷ ಎಂದು ಗುರುತಿಸಲಾಗಿದೆ. ಬಂಧಿತನನ್ನು ವಿಚಾರಣೆಗೊಳಪಡಿಸಲಾಗಿ ಈತ ತಾನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಸ್ಕೂಟರ್ ಮಹೇಶ ಎಂಬಾತನಿಗೆ ಸೇರಿದ್ದಾಗಿದ್ದು, ಮಹೇಶನೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ರಮ್ಮನಹಳ್ಳಿ ನಿವಾಸಿ ಜಯಲಕ್ಷ್ಮಿ ಎಂಬಾಕೆ ಸ್ಕೂಟರ್ ನ್ನು ಯಾರಿಗಾದರೂ ಮಾರಾಟ ಮಾಡಿ ಎಂದು ತಿಳಿಸಿದ್ದಳು. ಮಹೇಶ್ ನನ್ನು ಮೂರು ತಿಂಗಳ ಕೆಳಗೆ ಕೊಲೆ ಮಾಡಲಾಗಿತ್ತು ಎಂದು ಬಾಯ್ಬಿಟ್ಟಿದ್ದಾನೆ. ಉದಯಗಿರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ದಸ್ತಗಿರಿ ಮಾಡಲಾಗಿದೆ.
ಮಹೇಶ ಕಾಣೆಯಾಗಿರುವ ಕುರಿತು ಮೈಸೂರಿನ ಕುವೆಂಪು ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು.