ಮೈಸೂರು

ಡಿ.24: ಗಡಿಗಳಿಲ್ಲದ ಕಾಡು ಪ್ರಾಣಿಗಳ ಜೀವನ ಉಪನ್ಯಾಸ

ಮೈಸೂರ್ ಸೈನ್ಸ್ ಫೌಂಡೇಷನ್ ಪ್ರತಿ ತಿಂಗಳು ಸಾರ್ವಜನಿಕರಿಗಾಗಿ ಹಮ್ಮಿಕೊಳ್ಳುವ ತಿಂಗಳ ವಿಜ್ಞಾನ ಉಪನ್ಯಾಸ ಕಾರ್ಯಕ್ರಮದಡಿಯಲ್ಲಿ 45ನೇ ವಿಶೇಷ ಉಪನ್ಯಾಸವನ್ನು ಡಿ.24 ರಂದು ಸಂಜೆ 5.30 ಕ್ಕೆಮೈಸೂರಿನ ಕಲಾಮಂದಿರದ ಮನೆಯಂಗಳದಲ್ಲಿ ಹಮ್ಮಿಕೊಳ್ಳಲಾಗಿದೆ.

‘ಗಡಿಗಳಿಲ್ಲದ ಕಾಡು ಪ್ರಾಣಿಗಳ ಜೀವನ’ ವಿಷಯಕುರಿತು ವೈಲ್ಡ್ ಲೈಫ್‍ ಕನ್ಸರ್ವೇಷನ್ ಫೌಂಡೇಷನ್ ಪರಿಸರತಜ್ಞ ರಾಜ್‍ಕುಮಾರ್‍ ದೇವರಾಜೆ ಅರಸ್ ಉಪನ್ಯಾಸ ನೀಡಲಿದ್ದಾರೆ.

ಆಸಕ್ತ ವಿದ್ಯಾರ್ಥಿಗಳು, ಶಿಕ್ಷಕರು ಮತ್ತು ಸಾರ್ವಜನಿಕರು ಕಾರ್ಯಕ್ರಮದಲ್ಲಿ ಭಾಗವಹಿಸಬಹುದು ಎಂದು ಮೈಸೂರ್ ಸೈನ್ಸ್ ಫೌಂಡೇಷನ್‍ನ ಕಾರ್ಯದರ್ಶಿ ಜಿ.ಬಿ. ಸಂತೋಷ್‍ಕುಮಾರ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ  ಮೊ.ಸಂ. 8105503863 ಸಂಪರ್ಕಿಸಬಹುದು.

Leave a Reply

comments

Related Articles

error: