ಮೈಸೂರು

ವಿಶ್ವಪ್ರಜ್ಞ ಕಾಲೇಜು ವಿದ್ಯಾರ್ಥಿ ರಾಷ್ಟ್ರಮಟ್ಟದ ಕರಾಟೆಯಲ್ಲಿ ಪ್ರಥಮ

ಮೈಸೂರು,ಆ.30:- ಮೈಸೂರಿನ ದಟ್ಟಗಳ್ಳಿಯಲ್ಲಿರುವ ಎಸ್‍ವಿಜಿ ವಿಶ್ವಪ್ರಜ್ಞ ಸಂಯುಕ್ತ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿ ರಕ್ಷಿತ್ ಗೌಡ  ಇತ್ತೀಚಿಗೆ ಬೆಂಗಳೂರಿನಲ್ಲಿ ಜಪಾನ್ ಕರಾಟೆ- ಡೊ ಫೆಡರೇಷನ್ ಆಯೋಜಿಸಿದ್ದ  ‘ಅಲ್ ಇಂಡಿಯಾ ಹಕುಕೈ ಓಪನ್ ಕರಾಟೆ ಚಾಂಪಿಯನ್‍ಶಿಪ್ 2018-19ರ 16-17 ವಯಸ್ಸಿನ ವಿಭಾಗದ ಕುಮಿಟೆಯಲ್ಲಿ ರಾಷ್ಟ್ರಮಟ್ಟದಲ್ಲಿ  ಪ್ರಥಮ ಸ್ಥಾನ ಪಡೆದು ಸಾಧನೆಗೈದಿದ್ದಾರೆ.

ಇವರು ಬ್ಲಾಕ್‍ ಬೆಲ್ಟ್‍ನಲ್ಲಿ ಪ್ರಥಮ ಗ್ರೇಡ್ ಪಡೆದಿರುತ್ತಾರೆ.  ವಿದ್ಯಾರ್ಥಿಯ ಈ ಸಾಧನೆಗೆ ಕಾಲೇಜು ಆಡಳಿತ ಮಂಡಳಿ, ಅಧ್ಯಾಪಕ, ಅಧ್ಯಾಪಕೇತರ ಸಿಬ್ಬಂದಿಗಳು ಕಾಲೇಜಿನ ದೈಹಿಕ ಶಿಕ್ಷಣ ನಿರ್ದೇಶಕ ಎಂ.ಪಿ.ಹರೀಶ್, ಟ್ರಸ್ಟಿ ಎಚ್.ಎಸ್.ರಂಗನಾಥ್, ವ್ಯವಸ್ಥಾಪಕ ಟ್ರಸ್ಟಿ ವಿಶ್ವನಾಥ್ ಶೇಷಾಚಲ, ಖಜಾಂಜಿ ಎಸ್. ಮನೋಹರ್, ಆಡಳಿತಾಧಿಕಾರಿ ಡಾ.ಕೆಂಪೇಗೌಡ, ಪ್ರಾಂಶುಪಾಲ ರಚನ್ ಅಪ್ಪಣಮಯ್ಯ ಅಭಿನಂದನೆ ಸಲ್ಲಿದ್ದಾರೆ. (ಜಿ.ಕೆ,ಎಸ್.ಎಚ್)

Leave a Reply

comments

Related Articles

error: