ಮೈಸೂರು

ಬಂಡಾಯ ಅಭ್ಯರ್ಥಿಗಳನ್ನು ಉಚ್ಛಾಟಿಸಿದ ಬಿಜೆಪಿ

ಮೈಸೂರು,ಆ.30 : ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಪಕ್ಷದಿಂದ ಬಂಡಾಯವೆಂದು ಸ್ಪರ್ಧಿಸಿರುವ ಅಭ್ಯರ್ಥಿಗಳನ್ನು ಭಾರತೀಯ ಜನತಾ ಪಕ್ಷವು ಉಚ್ಛಾಟಿಸಿದೆ.

ಮೈಸೂರಿನ 58ನೇ ವಾರ್ಡಿನ ರಾಕೇಶ್, 44ನೇ ವಾರ್ಡಿನ ಕೆ.ಎನ್.ಶೋಭಾ, ತಿ.ನರಸೀಪುರದ 4ನೇ ವಾರ್ಡಿನ ಎಲ್.ಮಂಜುನಾಥ್, 7ನೇ ವಾರ್ಡಿನ ಲಕ್ಷ್ಮಿ, ಹೆಗ್ಗಡದೇವನಕೋಟೆಯ 12ನೇ ವಾರ್ಡಿನ ವಿಶ್ವರಾಧ್ಯ, 21ನೇ ವಾರ್ಡಿನ ಉಮೇಶ್ ಇವರುಗಳನ್ನು ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಉಚ್ಚಾಟಿಸಿರುವುದಾಗಿ ಜಿಲ್ಲಾಧ್ಯಕ್ಷ ಎಂ.ಶಿವಣ್ಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: