ಕರ್ನಾಟಕ

ವಿಶ್ವ ಕಲ್ಯಾಣ ಚಿಟ್ಸ್ ಪ್ರೈ.ಲಿ. ಬಗ್ಗೆ ಸಾರ್ವಜನಿಕರ ಮಾಹಿತಿ

ಬೆಂಗಳೂರು (ಆ.30): ವಿಶ್ವ ಕಲ್ಯಾಣ ಚಿಟ್ಸ್ ಪ್ರೈ. ಲಿ. ನಂ 3/2, ತಿಮ್ಮಯ್ಯ ಟವರ್ಸ್, 4ನೇ ಮಹಡಿ, 1ನೇ ಅಡ್ಡರಸ್ತೆ, ಗಾಂಧಿನಗರ, ಬೆಂಗಳೂರು – 560 009 ಈ ಸಂಸ್ಥೆಯು ರಿಜಿಸ್ಟ್ರಾರ್ ಆಫ್ ಕಂಪನೀಸ್‍ನಲ್ಲಿ ನೊಂದಣಿಗೊಂಡು ಚೀಟಿ ವ್ಯವಹಾರ ನಡೆಸುತ್ತಿರುವುದಾಗಿ ತಿಳಿಸಿ, ಚೀಟಿ ವ್ಯವಹಾರವನ್ನು ನಡೆಸಲು ನೀಡಿರುವ ಆದೇಶವನ್ನು ರದ್ದುಪಡಿಸಲು ಕೋರಿರುತ್ತಾರೆ.

ಕಂಪನಿಯ ಕೋರಿಕೆ ಬಗ್ಗೆ ಪರಿಶೀಲಿಸಬೇಕಾಗಿದೆ. ಈ ಸಂಸ್ಥೆಯಲ್ಲಿ ಯಾವುದೇ ಚಂದಾದಾರರು/ಸಾರ್ವಜನಿಕರು ಹಣ ಪಾವತಿಸಿ ಬಾಕಿ ಇದ್ದಲ್ಲಿ ಅಥವಾ ಚೀಟಿ ಸಂಸ್ಥೆಯಿಂದ ಯಾವುದೇ ಹಣ ಬರಬೇಕಾಗಿದ್ದಲ್ಲಿ ಲಿಖಿತ ರೂಪದಲ್ಲಿ ಹದಿನೈದು ದಿನಗಳೊಳಗಾಗಿ ಸಹಕಾರ ಸಂಘಗಳ ನಿಬಂಧಕರ ಕಚೇರಿ, ನಂ 1, ಆಲಿ ಆಸ್ಕರ ರಸ್ತೆ, ಬೆಂಗಳೂರು – 52 ಈ ವಿಳಾಸಕ್ಕೆ ತಿಳಿಸತಕ್ಕದ್ದು, ತಪ್ಪಿದಲ್ಲಿ ಕಾನೂನು ಪ್ರಕಾರ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಹಕಾರ ಸಂಘಗಳ ನಿಬಂಧಕರು ತಿಳಿಸಿದ್ದಾರೆ. (ಎನ್.ಬಿ)

Leave a Reply

comments

Related Articles

error: