ಕರ್ನಾಟಕ

ನವೋದಯ ಶಾಲೆ ಶಿಕ್ಷಕರ ಹುದ್ದೆ : ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟ

ಬೆಂಗಳೂರು (ಆ.30): ಕರ್ನಾಟಕ ಲೋಕಸೇವಾ ಆಯೋಗವು ಅಲ್ಪಸಂಖ್ಯಾತರ ನಿರ್ದೇಶನಾಲಯದಲ್ಲಿನ ಅಲ್ಪಸಂಖ್ಯಾತರ ಮಾದರಿ ವಸತಿ ಶಾಲೆಯಲ್ಲಿನ (ನವೋದಯ)ದಲ್ಲಿ ಕನ್ನಡ ಶಿಕ್ಷಕರು 05+01 (ಹೈ.ಕ), ಗಣಿತ ಶಿಕ್ಷಕರು 05 + 01 (ಹೈ.ಕ), ಸಮಾಜ ವಿಜ್ಞಾನ ಶಿಕ್ಷಕರು 03+01 (ಹೈ.ಕ), ಭೌತಶಾಸ್ತ್ರ ಶಿಕ್ಷಕರು 03+01 (ಹೈ.ಕ.) ರಸಾಯನಶಾಸ್ತ್ರ ಶಿಕ್ಷಕರು 03+01 (ಹೈ.ಕ.) ಪ್ರಯೋಗಶಾಲಾ ಸಹಾಯಕರು 02+02 (ಹೈ.ಕ), ಗಣಕಯಂತ್ರ ಶಿಕ್ಷಕರು 03+01 (ಹೈ.ಕ) ಮತ್ತು ಪೌರಾಡಳಿತ ನಿರ್ದೇಶನಾಲಯದ ಮಹಾನಗರಪಾಲಿಕೆಯಲ್ಲಿನ ಎಲೆಕ್ಟ್ರಿಷಿಯನ್ ಗ್ರೇಡ್ – 12, ಎಲೆಕ್ಟ್ರಿಷಿಯನ್ ಗ್ರೇಡ್ – 16 ಹುದ್ದೆಗಳಿಗೆ ದಿನಾಂಕ: 27-08-2018 ರಂದು ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಆಯೋಗದ ಅಂತರ್ಜಾಲದಲ್ಲಿ http://kpsc.kar.nic.in ಪ್ರಕಟಿಸಲಾಗಿದೆ.
ಆಕ್ಷೇಪಣೆಗಳನ್ನು ತಾತ್ಕಾಲಿಕ ಆಯ್ಕೆಪಟ್ಟಿ ಪ್ರಕಟಿಸಲಾಗದ ದಿನಾಂಕದಿಂದ 7 ದಿನಗಳೊಳಗಾಗಿ ಸಲ್ಲಿಸಬಹುದಾಗಿದೆ ಎಂದು ಕರ್ನಾಟಕ ಲೋಕಸೇವಾ ಆಯೋಗ ತಿಳಿಸಿದೆ. (ಎನ್.ಬಿ)

Leave a Reply

comments

Related Articles

error: