ಸುದ್ದಿ ಸಂಕ್ಷಿಪ್ತ

ಸೆ.2ರಂದು ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ

ಮೈಸೂರು,ಆ.30 : ಭಾರತ್ ಕೋ ಜಾನೋ ರಸಪ್ರಶ್ನೆ ಸ್ಪರ್ಧೆ2018 ಹಾಗೂ ಭಾರತ ವಿಕಾಸ ಪರಿಷತ್ ಪರಮಹಂಸ ಶಾಖೆಯ ಉದ್ಘಾಟನೆಯನ್ನು ಸೆ.2ರ ಬೆಳಗ್ಗೆ 9.30ಕ್ಕೆ ಸರಸ್ವತಿಪುರಂನ ವಿಜಯ ವಿಠ್ಠಲ ಕಾಲೇಜಿನಲ್ಲಿ ಆಯೋಜಿಸಲಾಗಿದೆ.

ವಿಜಯವಿಠ್ಠಲ ವಿದ್ಯಾಸಂಸ್ಥೆ ಕಾರ್ಯದರ್ಶಿ ಆರ್.ವಾಸುದೇವ ಭಟ್ ಉದ್ಘಾಟಿಸುವರು, ಸ್ವರ ಸಾಗರ ಮ್ಯೂಸಿಕ್ ಫೌಂಡೇಶನ್ ಅಧ್ಯಕ್ಷ ಡಿ.ಎನ್.ರಾಘವೇಂದ್ರ, ಸರಿಗಮಪ ಖ್ಯಾತಿಯ ತನುಶ್ರೀ, ಇರುವರು, ಭಾ.ವಿ.ಪ ಕರ್ನಾಟಕ ದಕ್ಷಿಣ ಪ್ರಾಂತ ಅಧ್ಯಕ್ಷ ಡಿ.ಪಿ.ಸ್ವಾಮಿ ನೂತನ ಶಾಖೆಯನ್ನು ಉದ್ಘಾಟಿಸುವರು, ಅಧ್ಯಕ್ಷ ಡಾ.ಬಿ.ಎನ್.ರಂಗನಾಥ ರಾವ್ ಅಧ್ಯಕ್ಷತೆ ವಹಿಸುವರು.

ಸಂಜೆ 3.30ಕ್ಕೆ ಸಮಾರೋಪ ಸಮಾರಂಭ, ಸಿಂಡಿಕೇಟ್ ಬ್ಯಾಂಕಿನ ನಿವೃತ್ತ ವಿಭಾಗೀಯ ವ್ಯವಸ್ಥಾಪಕ ಎಂ.ಡಿ.ಕಿಣಿ ಇರುವರು, ಪ್ರಾಂಶುಪಾಲ ಸತ್ಯಪ್ರಕಾಶ್ ಬಹುಮಾನ ವಿತರಿಸುವರು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. (ಕೆ.ಎಂ.ಆರ್)

Leave a Reply

comments

Related Articles

error: