ಮೈಸೂರು

ಯುವರಾಜ ಕಾಲೇಜಿನ ವಿವಿಧ ಕೋರ್ಸ್‍ಗಳಿಗೆ ಅರ್ಜಿ ಆಹ್ವಾನ: ಗೊಂದಲಗಳ ಕುರಿತು ಪ್ರಾಂಶುಪಾಲರ ಸ್ಪಷ್ಟೀಕರಣ

ಯುವರಾಜ ಕಾಲೇಜಿನಿಂದ ಪ್ರಸ್ತಕ ಸಾಲಿನಲ್ಲಿ ನೂತನವಾಗಿ ಆರಂಭವಾಗಿರುವ ಎಂ.ಬಿ.ಎ ಮತ್ತು ಎಂ.ಸಿ.ಎ. ಕೋರ್ಸ್‍ಗಳ ಪ್ರವೇಶಾತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಗಣಿತಶಾಸ್ತ್ರ, ಸಸ್ಯಶಾಸ್ತ್ರ, ಭೌತಶಾಸ್ತ್ರ, ರೇಷ್ಮೇಕೃಷಿ ಹಾಗೂ ಇಂಗ್ಲಿಷ್ ವಿಷಯಗಳಲ್ಲಿ ಈಗಾಗಲೇ ಸ್ನಾತಕ ಮತ್ತು ಸ್ನಾತಕೋತ್ತರ ಕೋರ್ಸ್‍ಗಳು ನಡೆಯುತ್ತಿದ್ದು 2014-15 ನೇ ಸಾಲಿನಲ್ಲಿ ಹೊಸದಾಗಿ ಎಂ.ಬಿ.ಎ. ಮತ್ತು ಎಂ.ಸಿ.ಎ. ಕೋರ್ಸ್‍ಗಳಿಗೆ ಕೆ.ಇ.ಎ. ಸೀಟ್ ಹಂಚಿಕೆ ಮೂಲಕ ಪ್ರವೇಶ ಕಲ್ಪಿಸಲಾಗುವುದು. 2016-17 ನೇ ವರ್ಷದ ಕೋರ್ಸ್‍ಗಳಿಗೆ ಪಿ.ಜಿ.ಸಿ.ಇ.ಟಿ ಪರೀಕ್ಷೆಯಲ್ಲಿ ತೇರ್ಗಡೆಯಾಗಿರುವ ಆಸಕ್ತ ಅಭ್ಯರ್ಥಿಗಳು ಆಗಸ್ಟ್ 30 ರೊಳಗೆ ಅರ್ಜಿಗಳನ್ನು ಸಲ್ಲಿಸಲು ಕೋರಲಾಗಿದ್ದು ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ, ಕಛೇರಿ- 0821-2419292/2419240; ಎಂ.ಸಿ.ಎ ವಿಭಾಗ 0821-2419164/165 ಮತ್ತು ಎಂ.ಬಿ.ಎ. ವಿಭಾಗದ 984429733 ಅನ್ನು ಸಂಪರ್ಕಿಸಬಹುದು.

ಗೊಂದಲಗಳ ಕುರಿತು ಪ್ರಾಂಶುಪಾಲರ ಸ್ಪಷ್ಟೀಕರಣ:

ತಾಂತ್ರಿಕ ಶಿಕ್ಷಣ ಸಂಸ್ಥೆಗಳಲ್ಲದ ಸ್ವಾಯತ್ತ ಕಾಲೇಜುಗಳಲ್ಲಿ ಎಂ.ಬಿ.ಎ ಮತ್ತು ಎಂ.ಸಿ.ಎ. ಸ್ನಾತಕೋತ್ತರ ಕೋರ್ಸ್‍ಗಳನ್ನು ನಡೆಸಲು ಎ.ಐ.ಸಿ.ಟಿ.ಇ. ಅನುಮತಿ ಅಗತ್ಯವಿಲ್ಲವೆಂದು ಸರ್ವೋಚ್ಚ ನ್ಯಾಯಾಲಯ ತೀರ್ಪು ನೀಡಿದ್ದು, ಈ ಕುರಿತು ಅಖಿಲ ಭಾರತ ತಾಂತ್ರಿಕ ಶಿಕ್ಷಣ ಮಂಡಳಿ ಕೂಡ ಸಾರ್ವಜನಿಕ ನೋಟಿಸ್ ನೀಡಿದೆ. ಸರಿಯಾದ ಮಾಹಿತಿ ಇಲ್ಲದ ಕೆಲವು ಮಾಧ್ಯಮಗಳು ಈ ವಿಷಯದಲ್ಲಿ ತಪ್ಪಾಗಿ ಪ್ರಕಟಿಸಿದ್ದರಿಂದ ಗೊಂದಲ ಉಂಟಾಗಿದೆ. ವಿದ್ಯಾರ್ಥಿಗಳು – ಪೋಷಕರು ಇಂತಹ ವರದಿಗಳಿಗೆ ಕಿವಿಗೊಡಬಾರದು ಎಂದು ಕಾಲೇಜು ಆಡಳಿತ ಮಂಡಳಿ ಪರವಾಗಿ ಪ್ರಾಂಶುಪಾಲರು ಸ್ಪಷ್ಟನೆ ನೀಡಿದ್ದಾರೆ.

Leave a Reply

comments

Related Articles

error: