
ಪ್ರಮುಖ ಸುದ್ದಿ
ಹೂ ಮಾರುತ್ತಿದ್ದ ಬಾಲಕಿಯ ಕಂಡು ಮರುಗಿದ ಸಿಎಂ : ಬಾಲಕಿಯ ಮನೆಗೆ ತಹಶೀಲ್ದಾರ್ ಭೇಟಿ
ರಾಜ್ಯ(ಮಂಡ್ಯ)ಆ.31:- ಮುಖ್ಯಮಂತ್ರಿ ಕುಮಾರಸ್ವಾಮಿಯವರ ಬಳಿ ಬಳಿ ಕಷ್ಟ ಹೇಳಿಕೊಂಡ ಬಾಲಕಿ ಮನೆಗೆ ಶ್ರೀರಂಗಪಟ್ಟಣದ ತಹಶೀಲ್ದಾರ್ ನಾಗೇಶ್ ಭೇಟಿ ನೀಡಿದರು.
ಶ್ರೀರಂಗಪಟ್ಟಣ ದ ತಹಶೀಲ್ದಾರ್ ನಾಗೇಶ್ ಅವರು ಮುಖ್ಯಮಂತ್ರಿ ಕುಮಾರಸ್ವಾಮಿಯರು ಭೇಟಿ ಮಾಡಿದ್ದ ಬಾಲಕಿ ಪೋಷಕರಿಂದ ಮಾಹಿತಿ ಸಂಗ್ರಹಿಸಿದರು. ಮೊನ್ನೆ ಸಿ.ಎಂ ಕೆ.ಆರ್.ಎಸ್.ನಿಂದ ರಾಮನಗರಕ್ಕೆ ತೆರಳುವ ವೇಳೆ ಬೆಳಗೊಳ ಗ್ರಾಮದ ಬಳಿ ಮುಖ್ಯಮಂತ್ರಿಗಳ ಕಣ್ಣಿಗೆ ಬಾಲಕಿಯೋರ್ವಳು ಹೂಮಾರುತ್ತಿದ್ದ ಸ್ಥಿತಿಯಲ್ಲಿ ಕಣ್ಣಿಗೆ ಬಿದ್ದಿದ್ದಳು.ಹೂ ಮಾರುತ್ತಿದ್ದ ಶಬಬ್ತಾಜ್ ಹೆಸರಿನ ಬಾಲಕಿಯನ್ನು ಕಂಡು ಮುಖ್ಯಮಂತ್ರಿಗಳು ಮಾತನಾಡಿಸಿದ್ದರು. ಮಾತನಾಡುವ ವೇಳೆ ಬಾಲಕಿ ಕಷ್ಟ ಕೇಳಿ ತಂದೆಯೊಂದಿಗೆ ಬೆಂಗಳೂರಿಗೆ ಬಾ ಸಹಾಯ ಮಾಡುತ್ತೇನೆ ಎಂದು ಭರವಸೆ ನೀಡಿ ತೆರಳಿದ್ದರು. ಮುಖ್ಯಮಂತ್ರಿಗಳ ಸೂಚನೆ ಮೇರೆಗೆ ಗ್ರಾಮಕ್ಕೆ ತಹಶೀಲ್ದಾರ್ ಭೇಟಿ ನೀಡಿದ್ದಾರೆ. ಬಾಲಕಿಯ ಮನೆಯ ಪರಿಸ್ಥಿತಿ ವರದಿ ನೀಡಿ ಸಿ.ಎಂ. ಭೇಟಿಗೆ ದಿನಾಂಕ ನಿಗದಿ ಮಾಡಲಿದ್ದಾರೆ ಎನ್ನಲಾಗಿದೆ. (ಕೆ.ಎಸ್,ಎಸ್.ಎಚ್)