ಮೈಸೂರು

ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ವೈನ್ ವಶ

ಮೈಸೂರು,ಆ.31:- ಗೋಕುಲಂನ ನಿವಾಸವೊಂದರಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ 48ಲೀಟರ್ ವೈನ್ ನ್ನು ಅಬಕಾರಿ ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಗೋಕುಲಂ ನ ಮನೆಯೊಂದರಲ್ಲಿ ಅಕ್ರಮವಾಗಿ ವೈನ್ ಸಂಗ್ರಹಿಸಿಟ್ಟ ಕುರಿತು ಖಚಿತ ಮಾಹಿತಿ ಪಡೆದು ದಾಲಿ ನಡೆಸಿದ ಅಬಕಾರಿ ಪೊಲೀಸರು ವೈನ್ ವಶಪಡಿಸಿಕೊಂಡಿದ್ದು,  ಆರೋಪಿಗಳು ಪರಾರಿಯಾಗಿದ್ದಾರೆ. 65 ಬಾಟಲಿಗಳಲ್ಲಿ ಅಕ್ರಮವಾಗಿ ವೈನ್ ನ್ನು ಸಂಗ್ರಹಿಸಿಡಲಾಗಿದ್ದು, ಅದರ ಮೌಲ್ಯ ಸುಮಾರು 16ಸಾವಿರ ರೂ.ಎಂದು ಅಂದಾಜಿಸಲಾಗಿದೆ. ಕೊಡಗಿನಲ್ಲಿ ಮನೆಯಲ್ಲಿಯೇ ವೈನ್ ನ್ನು ತಯಾರಿಸಲಾಗಿದ್ದು, ಪ್ರವಾಹ ಸಂದರ್ಭದಲ್ಲಿ ಇಲ್ಲಿ ತಂದು ಶೇಖರಿಸಿರಬಹುದು ಎಂದು ಶಂಕಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: