ಕರ್ನಾಟಕ

ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ: 1,82,687 ಮತದಾರರು

ಮಂಡ್ಯ (ಆ.30): ಮಂಡ್ಯ ಜಿಲ್ಲೆಯ ಮಂಡ್ಯ, ಮದ್ದೂರು, ಪಾಂಡವಪುರ, ನಾಗಮಂಗಲ ಹಾಗೂ ಬೆಳ್ಳೂರು ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ 89,525 ಪುರುಷ ಮತದಾರರು, 93,133 ಮಹಿಳಾ ಮತದಾರರು ಹಾಗೂ ಇತರೆ ವರ್ಗಕ್ಕೆ ಸೇರಿದ 29 ಮತದಾರರು ಸೇರಿದಂತೆ ಒಟ್ಟು 1,82,687 ಮತದಾರರಿದ್ದಾರೆ.

ಮಂಡ್ಯ ನಗರಸಭೆ ವ್ಯಾಪ್ತಿಯಲ್ಲಿ 55,829 ಪುರುಷ, 58,523 ಮಹಿಳಾ ಹಾಗೂ ಇತರೆ ವರ್ಗಕ್ಕೆ ಸೇರಿದ 24 ಮತದಾರರು ಸೇರಿದಂತೆ ಒಟ್ಟು 1,14,376 ಮತದಾರರಿದ್ದಾರೆ. ಮದ್ದೂರು ಪುರಸಭೆ ವ್ಯಾಪ್ತಿಯಲ್ಲಿ 11,105 ಪುರುಷ, 11,606 ಮಹಿಳಾ, ಇತರೆ ವರ್ಗದ 5 ಮತದಾರರು ಸೇರಿದಂತೆ 22,716 ಮತಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ.

ಪಾಂಡವಪುರ ಪುರಸಭೆ ವ್ಯಾಪ್ತಿಯಲ್ಲಿ 7696 ಪುರುಷ ಮತದಾರರು ಹಾಗೂ 7980 ಮಹಿಳಾ ಮತದಾರರು ಸೇರಿದಂತೆ ಒಟ್ಟು 15,676 ಮತದಾರರಿದ್ದು, ನಾಗಮಂಗಲ ಪುರಸಭೆ ವ್ಯಾಪ್ತಿಯಲ್ಲಿ 10,448 ಪುರುಷ ಹಾಗೂ 10345 ಮಹಿಳಾ ಮತದಾರರು ಸೇರಿದಂತೆ 20,793 ಮತದಾರರಿದ್ದಾರೆ.

ಬೆಳ್ಳೂರು ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ 4,447 ಪುರುಷ ಹಾಗೂ 4679 ಮಹಿಳಾ ಮತದಾರರು ಸೇರಿದಂತೆ ಒಟ್ಟು 9126 ಮತದಾರರು ಮತಚಲಾಯಿಸುವ ಹಕ್ಕನ್ನು ಪಡೆದಿದ್ದಾರೆ ಎಂದು ಎಂದು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಚುನಾವಣಾಧಿಕಾರಿ ಎನ್.ಮಂಜುಶ್ರೀ ಅವರು ತಿಳಿಸಿದ್ದಾರೆ.(ಎನ್.ಬಿ)

Leave a Reply

comments

Related Articles

error: