ಮೈಸೂರು

ವಸತಿ ನಿಲಯಗಳ ಸೋಲಾರ್ ವಾಟರ್ ಹೀಟರ್ ಅಳವಡಿಕೆಗೆ ಮೇಯರ್ ಚಾಲನೆ

ಮೈಸೂರು ನಗರದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ 14 ವಸತಿ ನಿಲಯಗಳಿಗೆ 30 ಸೋಲಾರ್‍ವಾಟರ್ ಹಿಟರ್ ಅಳವಡಿಕೆಗೆ ಗಾಯತ್ರಿಪುರಂನ ವಿದ್ಯಾರ್ಥಿ ನಿಲಯದಲ್ಲಿ ಮೇಯರ್ ಎಂ.ಜೆ. ರವಿ ಚಾಲನೆ ನೀಡಿದರು.

ಹಿಂದುಳಿದ ಕಲ್ಯಾಣ ಇಲಾಖೆಯ ಮನವಿಗೆ ಸ್ಪಂದಿಸಿದ ನಗರಪಾಲಿಕೆಯು, ನಗರ ವ್ಯಾಪ್ತಿಯಲ್ಲಿ ಬರುವ ಹಿಂದುಳಿದ ವರ್ಗದ 14 ವಸತಿ ನಿಲಯಗಳಿಗೆ ವಾಟರ್ ಹೀಟರ್ ಸ್ಥಾಪನೆಗೆ ಅನುಮೋದನೆ ನೀಡಿತ್ತು. ಈ ಹಿನ್ನಲೆಯಲ್ಲಿ ಮೇಯರ್ ರವಿ 96 ಸಾವಿರ ಮೌಲ್ಯದ 500 ಲೀಟರ್ ಸಾಮರ್ಥ್ಯದ ವಾಟರ್ ಹೀಟರ್‍ಗೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಹಿಂದುಳಿದ ಇಲಾಖೆಗೆ ಸೌಲಭ್ಯ ಕಲ್ಪಿಸಲು ನಗರಪಾಲಿಕೆ ಸದಾಕಾಲ ಸಿದ್ಧವಿದ್ದು, ಅಗತ್ಯ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.

ಇನ್ನೂ ಒಂದು ವಾರದಲ್ಲಿ ಉಳಿದ ವಸತಿ ನಿಲಯಗಳಲ್ಲೂ ವಾಟರ್‍ ಹೀಟರ್ ಅಳವಡಿಸುವುದಾಗಿ ತಿಳಿಸಿದರು.

ನಗರಪಾಲಿಕೆ ಸದಸ್ಯ ಸಂದೇಶ್‍ ಸ್ವಾಮಿ, ನಗರಪಾಲಿಕೆ ಆರೋಗ್ಯ ಸ್ಥಾಯಿ ಸಮಿತಿ ಅಧ್ಯಕ್ಷ ಮಹದೇವಪ್ಪ, ನಗರಪಾಲಿಕೆ ಎಡಿಸಿ ರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾಧಿಕಾರಿ ಸೋಮಶೇಖರ್, ಅಸಿಸ್ಟೆಂಟ್ ಕಮೀಷನರ್ ಪುಟ್ಟಶೇಷಗಿರಿ, ತಾಲೂಕು ಅಧಿಕಾರಿ ಕೊಪ್ಪದ್, ನಿಲಯ ಪಾಲಕರಾದ ಅನುಪಮ, ಜಗದೀಶ್ ಮತ್ತಿತರರು ಉಪಸ್ಥಿತರಿದ್ದರು.

Leave a Reply

comments

Related Articles

error: