ಮೈಸೂರು

ಸೆ.1-2 : “ICSE ಶಾಲೆಗಳ ರಾಜ್ಯ ಬ್ಯಾಸ್ಕೆಟ್ಬಾಲ್ ಪಂದ್ಯಾವಳಿ – 2018”

ಮೈಸೂರು,ಆ.31:-  ನಗರದ ಡೀ ಪೌಲ್ ಅಂತಾರಾಷ್ಟ್ರೀಯ ವಸತಿಯುತ ಶಾಲೆಯಲ್ಲಿ ಸೆ.1 – 2 ರಂದು ICSE ಶಾಲಾ ಕೌನ್ಸಿಲ್ ಸಹಯೋಗದೊಂದಿಗೆ ರಾಜ್ಯ ಬ್ಯಾಸ್ಕೆಟ್ಬಾಲ್ ಪಂದ್ಯಾವಳಿ ಆಯೋಜಿಸಲಾಗಿದೆ.

ಈ ಪಂದ್ಯಾವಳಿ ಸೀನಿಯರ್ ಮತ್ತು ಜೂನಿಯರ್ ಬಾಲಕರು ಹಾಗೂ ಸೀನಿಯರ್ ಮತ್ತು ಜೂನಿಯರ್
ಬಾಲಕಿಯರ ವಿಭಾಗದಲ್ಲಿ ನಡೆಯಲಿದೆ. ಈ ಪಂದ್ಯಗಳು ಮುಂಬರುವ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಪಂದ್ಯಾವಳಿಗಳಿಗೆ ರಾಜ್ಯ
ತಂಡಕ್ಕೆ ಆಯ್ಕೆ ಪ್ರಕ್ರಿಯೆಯಾಗಿದ್ದು ರಾಜ್ಯಾದ್ಯಂತ 60ಕ್ಕೂ ಹೆಚ್ಚು ICSE ಶಾಲೆಗಳು ಭಾಗವಹಿಸಲಿದ್ದು, 80ಕ್ಕೂ ಹೆಚ್ಚು ಪಂದ್ಯಗಳು ನಡೆಯಲಿವೆ. ಈ ಪಂದ್ಯಾವಳಿಯಲ್ಲಿ ಪ್ರಥಮ ಪಂದ್ಯದಿಂದ ನಡೆಯುವ ಎಲ್ಲಾ ಪಂದ್ಯಗಳು ನಾಕೌಟ್ ಹಂತದಲ್ಲಿ
ನಡೆಯಲಿವೆ. ಪಂದ್ಯ ವಿಜೇತರಿಗೆ ಆಕರ್ಷಕ ಟ್ರೋಫಿ, ಪ್ರಮಾಣಪತ್ರ ಹಾಗೂ ಪದಕಗಳನ್ನು ನೀಡಲಾಗುವುದು ಎಂದು ಪಂದ್ಯಾವಳಿ ಸಂಯೋಜಕ ಸುಂದರೇಶ್ ಎಸ್.ತಿಳಿಸಿದ್ದಾರೆ. (ಎಂ.ಆರ್,ಎಸ್.ಎಚ್)

Leave a Reply

comments

Related Articles

error: