ಮೈಸೂರು

ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆ, ಆಸ್ತಿ ನಷ್ಟಕ್ಕೂ ವಿಮೆ ಮಾಡಿಸಲು ಜಿಲ್ಲಾಡಳಿತ ಸಿದ್ಧತೆ

ಮೈಸೂರು,ಆ.31:- ಮೈಸೂರು ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುವ ಆನೆಗಳು, ಮಾವುತರು, ಕಾವಾಡಿಗರಿಗಷ್ಟೇ ಅಲ್ಲದೇ, ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆ, ಆಸ್ತಿ ನಷ್ಟಕ್ಕೂ ವಿಮೆ ಮಾಡಿಸಲು ಮೈಸೂರು ಜಿಲ್ಲಾಡಳಿತ ಸಿದ್ಧತೆ ನಡೆಸಿದೆ.

ಈ ಕುರಿತಂತೆ ಮೈಸೂರು ಜಿಲ್ಲಾಧಿಕಾರಿ, ದಸರಾ ವಿಶೇಷಾಧಿಕಾರಿ ಅಭಿರಾಮ್ ಜಿ.ಶಂಕರ್ ದಿ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿಯ ವಿಮಾ ಯೋಜನೆಗೆ ಒಪ್ಪಿಗೆ ಸೂಚಿಸಿದ್ದು, ಕಂಪನಿಯ ಡಿವಿಜನ್ ಮ್ಯಾನೇಜರ್ ಅವರಿಗೆ ಪತ್ರ ಬರೆದಿದ್ದಾರಂತೆ. 12 ಆನೆಗಳಿಗೆ 32ಲಕ್ಷರೂ.ವಿಮಾ ಮೊತ್ತವಾಗಿದ್ದು, 40120ರೂ.ಪ್ರೀಮಿಯಂ ಪಾವತಿಸಬೇಕಿದೆ. ಮಾವುತರು, ಕಾವಾಡಿಗರು ಸೇರಿ ಒಟ್ಟು 24ಮಂದಿಯಿದ್ದು ತಲಾ 1ಲಕ್ಷರೂ. ವಿಮಾ ಮೊತ್ತವಿದೆ. 720ರೂ.ಪ್ರೀಮಿಯಂ ಪಾವತಿಸಬೇಕಿದೆ. ದಸರಾ ಆನೆಗಳಿಂದ ಸಾರ್ವಜನಿಕರಿಗೆ ತೊಂದರೆ ಮತ್ತು ಆಸ್ತಿಪಾಸ್ತಿ ನಷ್ಟವಾದಲ್ಲಿ 25ಲಕ್ಷರೂ. ವಿಮೆ ಮಾಡಿಸಲಾಗಿದೆ. ಇದಕ್ಕೆ 3540ರೂ.ಪ್ರೀಮಿಯಂ ಪಾವತಿಸಲಾಗಿದ್ದು, ವಿಮಾ ಅವಧಿ ಸೆ.2ರಿಂದ ಅ.31ರವರೆಗೆ ಚಾಲ್ತಿಯಲ್ಲಿರಲಿದೆ. ಆಕಸ್ಮಿಕ ಸಂದರ್ಭದಲ್ಲಿ ಮೂರು ದಿನಗಳೊಳಗೆ ವಿಮಾ ಮೊತ್ತವನ್ನು ಕ್ಲೈಂ ಮಾಡಬೇಕಿದ್ದು, ವನ್ಯಜೀವಿ ಉಪಅರಣ್ಯ ಸಂರಕ್ಷಣಾಧಿಕಾರಿಗಳ ಹೆಸರಿನಲ್ಲಿಯೇ ಪಾಲಿಸಿ ಮಾಡಿಸಲು ಸೂಚಿಸಲಾಗಿದೆ ಎಂದು ಬಲ್ಲ ಮೂಲಗಳಿಂದ ತಿಳಿದು ಬಂದಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: