ಕರ್ನಾಟಕ

ಮಾಜಿ ಪ್ರಧಾನಿ ದೇವೇಗೌಡರ ಅಧಿಕೃತ ಟ್ವೀಟರ್ ಖಾತೆ ಆರಂಭ

ಬೆಂಗಳೂರು (ಆ.31): ಮಾಜಿ ಪ್ರಧಾನಿ ಹಾಗೂ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡ ಅವರು ಅಧಿಕೃತವಾಗಿ ಟ್ವೀಟರ್‍ನಲ್ಲಿ ತಮ್ಮ ಖಾತೆ ತೆರೆದಿದ್ದಾರೆ.

ಹೆಚ್.ಡಿ ದೇವೇಗೌಡ ಹೆಸರಿನ ಟ್ವೀಟರ್ ಖಾತೆ ತೆರೆಯುತ್ತಲ್ಲೇ ಮೊದಲಿಗೆ ಅವರು ಶತದಿನ ಪೂರೈಸಿದ ರಾಜ್ಯದ ಜೆಡಿಎಸ್ ಕಾಂಗ್ರೆಸ್ ಸಮ್ಮಿಶ್ರ ಸರ್ಕಾರಕ್ಕೆ ಶುಭಾಶಯ ಕೋರಿದ್ದು, ಈ ಸರ್ಕಾರ ಐದು ವರ್ಷಗಳ ಪೂರ್ಣಾವಧಿಗೆ ಜನಪರ ಆಡಳಿತ ನೀಡುವ ಮೂಲಕ ರಾಜ್ಯವನ್ನು ಅಭಿವೃದ್ಧಿ ದಿಕ್ಕಿನಲ್ಲಿ ಮುನ್ನಡೆಸಲಿ ಎಂದು ಹಾರೈಸಿದ್ದಾರೆ.

ಇಷ್ಟೇ ಅಲ್ಲದೆ ಹಾಸನದ ಪ್ರವಾಹಪೀಡಿತ ಪ್ರದೇಶಕ್ಕೆ ಭೇಟಿ ನೀಡಿದ್ದು, ಚೆನ್ನೈನಲ್ಲಿ ಕರುಣಾನಿಧಿಯರ ಸ್ಮರಣಾರ್ಥ ನಡೆದ ಕಾರ್ಯಕ್ರಮಕ್ಕೆ ಹಾಜರಾಗಿದ್ದು, ವೈಎಸ್‍ವಿ ದತ್ತ ಅವರ ಪತ್ನಿ ನಿಧನರಾದಾಗ ಅಂತಿಮ ದರ್ಶನ ಪಡೆದ್ದು, ವರಮಹಾಲಕ್ಷ್ಮೀ ಹಬ್ಬಕ್ಕೆ ಶುಭಾಶಯ ಕೋರಿದ್ದು, ಬ್ರಿಟಿಷ್ ಹೈಕಮಿಷನರ್ ಭೇಟಿ ಮಾಡಿದ್ದು – ಹೀಗೆ ಟ್ವೀಟರ್ ಆರಂಭಿಕ ಹಂತದಲ್ಲಿ ಹಲವಾರು ವಿಷಯಗಳನ್ನು ಟ್ವೀಟರ್ ಮೂಲಕ ಹಂಚಿಕೊಂಡಿದ್ದಾರೆ ದೇವೇಗೌಡರು.

ಅವರ ಅಧಿಕೃತ ಟ್ವಿಟರ್ ಖಾತೆಗೆ ಭೇಟಿ ನೀಡಲು https://twitter.com/H_D_Devegowda ಕ್ಲಿಕ್ ಮಾಡಬಹುದು. (ಎನ್.ಬಿ)

Leave a Reply

comments

Related Articles

error: