ಮೈಸೂರು

ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣ ಸದ್ದು : ಮೂರು ಲಕ್ಷ ನಗದು, ಬೆಳ್ಳಿ ದೀಪ ವಶ; ಜೆಡಿಎಸ್ ಗೆ ಸೇರಿದ್ದಾ?

ಮೈಸೂರು,ಆ.31:- ಮೈಸೂರು ಮಹಾನಗರ ಪಾಲಿಕೆ ಚುನಾವಣೆಯಲ್ಲಿ ಜಣ ಜಣ ಕಾಂಚಾಣ ಸದ್ದು ಮಾಡುತ್ತಿದೆ. ಹಣ ಹಂಚುವ ವೇಳೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿದ್ದು  ಜೆಡಿಎಸ್ ಅಭ್ಯರ್ಥಿಯ ಹಣ ಎಂದು ಹೇಳಲಾಗುತ್ತಿದೆ.

ಸುಜುಕಿ ಆ್ಯಕ್ಸಿಸ್ ಬೈಕ್ ನಲ್ಲಿ ಹಂಚುತ್ತಿದ್ದ 3 ಲಕ್ಷದ 14ಸಾವಿರ ರೂ. ನಗದು , 3  ಜೊತೆ ಬೆಳ್ಳಿ ದೀಪವನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪಾಲಿಕೆ ವಾರ್ಡ್ 6 ರ ಜೆಡಿಎಸ್ ಅಭ್ಯರ್ಥಿ ಎಸ್.ಬಿ.ಎಂ. ಮಂಜು ಅವರಿಗೆ ಹಣ ಮತ್ತು ಬೆಳ್ಳಿ ವಸ್ತುಗಳು ಸೇರಿವೆ ಎನ್ನಲಾಗಿದೆ. ಗೋಕುಲಂ ಕಾಂಟೂರ್ ರಸ್ತೆಯಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದಿದ್ದು, ಹಣ ,ಬೆಳ್ಳಿ ವಸ್ತುಗಳು,  ಸ್ಕೂಟರ್ಗಳನ್ನು  ವಿವಿಪುರಂ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಇನ್ಸಪೆಕ್ಟರ್ ಸೂರಜ್ ಪ್ರಕರಣ ದಾಖಲಿಸಿಕೊಂಡಿದ್ದು, ರಾಜಾ ರೋಷವಾಗಿ ರಸ್ತೆ ಮಧ್ಯದಲ್ಲಿಯೇ ಜೆಡಿಎಸ್ ಕಾರ್ಯಕರ್ತರು ಹಣ ಹಂಚುತ್ತಿದ್ದರು ಎನ್ನಲಾಗಿದ್ದು, ನಂಬರ್ ಬೋರ್ಡ್ ಇಲ್ಲದ ಯೋಗೇಶ್ ಎಂಬಾತನಿಗೆ ಸೇರಿದ ಸುಜುಕಿ ಆ್ಯಕ್ಸಿಸ್ ಬೈಕ್ ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. (ಕೆ.ಎಸ್,ಎಸ್.ಎಚ್).

Leave a Reply

comments

Related Articles

error: