ಮೈಸೂರು

ಅಪ್ರಾಪ್ತ ಬಾಲಕಿ ಕಾಣೆ

ಮೈಸೂರು,ಆ.31 : ಬೆಳವಾಡಿ ಗ್ರಾಮದ ಕಾವ್ಯ ಎಂಬ 17 ವರ್ಷದ ಅಪ್ರಾಪ್ತ ಬಾಲಕಿ ಕಳೆದ ಆ.15ರಿಂದ ಕಾಣೆಯಾಗಿದ್ದಾರೆ.

ಸುಮಾರು 5.2 ಅಡಿ ಎತ್ತರ. ಗೋಧಿ ಬಣ್ಣ, ಸಾಧಾರಣ ಮೈಕಟ್ಟು, ದುಂಡು ಮುಖ ಹೊಂದಿರುವ ಈಕೆಯು ಕಾಣೆಯಾದ ದಿನದಂದು ಕಪ್ಪು ಬಣ್ಣದ ಟೀ ಶರ್ಟ್ ಹಾಗೂ ನೀಲಿ ಬಣ್ಣದ ಜೀನ್ಸ್ ಪ್ಯಾಂಟ್ ಧರಿಸಿದ್ದಳು. ಅಂದು ಬೆಳಗ್ಗೆ ಕಾಲೇಜಿಗೆಂದು ತೆರಳಿದವಳು ಮತ್ತೆ ಮನೆಗೆ ವಾಪಾಸಾಗಿಲ್ಲ ಎಂದು ಪೋಷಕರು ವಿಜಯನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.

ಈಕೆಯ ಬಗ್ಗೆ ಸುಳಿವು ದೊರೆತಲ್ಲಿ ವಿಜಯನಗರ ಪೊಲೀಸ್ ಠಾಣೆ 0821 2418117, 2418317, 2418517, ಪೊಲೀಸ್ ಕಂಟ್ರೋಲ್ ರೂಂ. 0821 2418339-340 ಅನ್ನು ಸಂಪರ್ಕಿಸಬಹುದೆಂದು ಠಾಣಾಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: