ಪ್ರಮುಖ ಸುದ್ದಿ

ಪರಪ್ಪನ ಅಗ್ರಹಾರದಲ್ಲಿ ಮೂರು ಕೆ ಜಿ ಗಾಂಜಾ ಪತ್ತೆ

ರಾಜ್ಯ(ಬೆಂಗಳೂರು)ಆ.31:- ಪರಪ್ಪನ ಅಗ್ರಹಾರದಲ್ಲಿ ಮೂರು ಕೆ ಜಿ ಗಾಂಜಾ ಪತ್ತೆಯಾಗಿದೆ.

ಚಾಲಕ ಭಾನು ಪ್ರಕಾಶ್ ಎಂಬಾತನ ವಾಹನದಲ್ಲಿದ್ದ ಗಾಂಜಾವನ್ನು ಸೈಕಲ್ ರವಿ ಪ್ರಕರಣದ ಆರೋಪಿ ವಿನೋದ್ ಎಂಬಾತನಿಗೆ ಸಪ್ಲೈ ಮಾಡಲು ತೆಗೆದುಕೊಂಡು ಹೋಗುತ್ತಿದ್ದ‌ ಎನ್ನಲಾಗಿದ್ದು,ವಾಹನ ತಪಾಸಣೆ ಮಾಡಿದ ಸೆಂಟ್ರಿ ದಿಲೀಪ್ ಕೈಗೆ ಭಾನು ಪ್ರಕಾಶ್ ಸಿಕ್ಕಿಬಿದ್ದಿದ್ದಾನೆ. ಬುಧವಾರ ಸಂಜೆ 4-30ರ ಸಂದರ್ಭದಲ್ಲಿ ಘಟನೆ ನಡೆದಿದ್ದು,  ಸಿಕ್ಕಿಬಿದ್ದ ಆರೋಪಿಯನ್ನು ಜೈಲು ಅಧಿಕಾರಿ ಬಿಟ್ಟು ಕಳಿಸಿದರಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಎದ್ದಿದೆ. ಒಂದೂವರೆ ಲಕ್ಷ ಹಣ ಪಡೆದು ಆರೋಪಿಯನ್ನು ಬಿಟ್ಟು ಕಳುಹಿಸಿರುವುದಾಗಿ ಖೈದಿಗಳು ಆರೋಪಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: