ಮೈಸೂರು

ಸುತ್ತೂರುಮಠದ ಬೆಳದಿಂಗಳ ಸಂಗೀತ : ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ ವೀಣಾವಾದನ

ಮೈಸೂರು,ಆ.31 : ಚಾಮುಂಡಿತಪ್ಪಲಿನಲ್ಲಿರುವ ಸುತ್ತೂರು ಮಠದಲ್ಲಿ ನಡೆಯುವ ಬೆಳದಿಂಗಳ ಸಂಗೀತ ಕಾರ್ಯಕ್ರಮದಲ್ಲಿ ಆಕಾಶವಾಣಿ ಮತ್ತು ದೂರದರ್ಶನ ಏ ಶ್ರೇಣಿ ಕಲಾವಿದೆ ವಿದುಷಿ ಪುಷ್ಪಾ ಕಾಶೀನಾಥ್ ಅವರು ವೀಣಾವಾದನ ನಡೆಸಿಕೊಟ್ಟರು.

ಸಂಗೀತ ಪರಂಪರೆಯಲ್ಲಿ ಜನಿಸಿ ಪುಷ್ಪಾ ಕಾಶೀನಾಥ್ ಅವರಿಗೆ ಆರಂಭದಲ್ಲಿ ತಾಯಿ ವಿದುಷಿ ಸರಸ್ವತಿಯವರೇ ಮೊದಲ ಗುರುಗಳಾಗಿದ್ದರು, ನಂತರ ಖ್ಯಾತ ಸಂಗೀತಶಾಸ್ತ್ರಜ್ಞೆ ವಿದುಷಿ ಟಿ.ಶಾರದ, ಗಾನಕಲಾಭೂಷಣ ಆನೂರು ಎಸ್.ರಾಮಕೃಷ್ಣ, ಗಾನಕಲಾ ಎಂ.ಎಸ್.ಶೀಲಾ ಅವರ ಬಳಿ ಸಂಗೀತ ಅಭ್ಯಾಸ ನಡೆಸಿದ್ದು, ಕನ್ನಡದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ.

ಇವರ ವೀಣಾವಾದನವು ಸಭಿಕರನ್ನು ಮಂತ್ರಮುಗ್ಧರನ್ನಾಗಿಸಿದ್ದು, ವಿದ್ವಾನ್ ಎ.ರಾಧೇಶ್ ಮೃದಂಗ, ವಿದ್ವಾನ್ ಎಸ್.ಮಂಜುನಾಥ್ ಘಟಂನಲ್ಲಿ ಸಾಥ್ ನೀಡಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: