ದೇಶಪ್ರಮುಖ ಸುದ್ದಿ

ಆರ್.ಎಸ್.ಎಸ್. ಕೂಡ ಉಗ್ರ ಸಂಘಟನೆಯಿದ್ದಂತೆ : ಮಾಜಿ ಸಂಸದೆ ರಮ್ಯಾ ಟ್ವೀಟ್‌

ನವದೆಹಲಿ (ಆ.31): ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಬ್ರಿಟನ್‌ ಪ್ರವಾಸದ ಸಂದರ್ಭದಲ್ಲಿ ಆರ್‌ಎಸ್‌ಎಸ್‌ ಅನ್ನು ಉಗ್ರರ ಜತೆ ನಂಟು ಹೊಂದಿದ ಆಪಾದನೆ ಎದುರಿಸುತ್ತಿರುವ, ಅರಬ್‌ ರಾಷ್ಟ್ರಗಳಲ್ಲಿ ಸಕ್ರಿಯವಾಗಿರುವ ಮುಸ್ಲಿಂ ಬ್ರದರ್‌ ಹುಡ್‌ ಜತೆ ಹೋಲಿಕೆ ಮಾಡಿ ವಿವಾದ ಸೃಷ್ಟಿಸಿದ್ದರು.

ಇದೀಗ ಕಾಂಗ್ರೆಸ್‌ ಸಾಮಾಜಿಕ ಜಾಲತಾಣ ವಿಭಾಗದ ಮುಖ್ಯಸ್ಥೆ, ಮಾಜಿ ಸಂಸದೆ ರಮ್ಯಾ ಕೂಡ ಅದೇ ರೀತಿ ಅರ್ಥ ಬರುವ ಟ್ವೀಟ್ ಮಾಡಿದ್ದಾರೆ. ಆರ್‌ಎಸ್‌ಎಸ್‌ ಹಾಗೂ ಮುಸ್ಲಿಂ ಬ್ರದರ್‌ಹುಡ್‌ ಎರಡಕ್ಕೂ ಕೆಲವೊಂದು ವಿಚಾರಗಳಲ್ಲಿ ಸಾಮ್ಯತೆ ಇದೆ ಎಂಬ ಅರ್ಥ ಬರುವ ಸಂದೇಶವೊಂದನ್ನು ಅವರು ಟ್ವೀಟರ್‌ನಲ್ಲಿ ಪ್ರಕಟಿಸಿದ್ದಾರೆ.

pic.twitter.com/5a4kgRqXp9
– Divya Spandana/Ramya (@divyaspandana) August 29, 2018

pic.twitter.com/5a4kgRqXp9
– Divya Spandana/Ramya (@divyaspandana) August 29, 2018

ಮುಸ್ಲಿಂ ಬ್ರದರ್‌ಹುಡ್‌ ಹಾಗೂ ಆರ್‌ಎಸ್‌ಎಸ್‌ ಎರಡೂ ಸ್ಥಾಪನೆಯಾಗಿದ್ದು 1920ರಲ್ಲಿ. ಎರಡೂ ಸಂಘಟನೆಗಳ ಉದ್ದೇಶ ಜಾತ್ಯತೀತ ದೇಶವನ್ನು ಬದಲಿಸಬೇಕು ಎಂಬುದು. 2011ರಲ್ಲಿ ಅರಬ್‌ ದಂಗೆಯಿಂದ ಮುಸ್ಲಿಂ ಬ್ರದರ್‌ಹುಡ್‌ಗೆ ಶಕ್ತಿ ಬಂದಿತ್ತು. 2012ರಲ್ಲಿ ಮೊಹಮ್ಮದ್‌ ಮೋರ್ಸಿ ಅವರು ಈಜಿಪ್ಟ್‌ ಅಧ್ಯಕ್ಷರಾಗಿದ್ದರು. 2011ರಲ್ಲಿ ಅಣ್ಣಾ ಚಳವಳಿಯಿಂದಾಗಿ 2014ರಲ್ಲಿ ಮೋದಿ ಅಧಿಕಾರಕ್ಕೇರಿದರು ಎಂದು ಅರ್ಥ ಬರುವ ರೀತಿ ರಮ್ಯಾ ಟ್ವೀಟ್ ಮಾಡಿದ್ದಾರೆ.(ಎನ್.ಬಿ)

Leave a Reply

comments

Related Articles

error: