ಕರ್ನಾಟಕಪ್ರಮುಖ ಸುದ್ದಿ

ವೋಡಾಫೋನ್- ಐಡಿಯಾ ವೀಲಿನ, 2ನೇ ಸ್ಥಾನಕ್ಕೆ ಕುಸಿದ ಏರ್ಟೆಲ್

ಬೆಂಗಳೂರು (ಆ.30): ಹದಿನೈದು ವರ್ಷಗಳ ಕಾಲ ಭಾರತದ ಟೆಲಿಕಾಂ ಮಾರುಕಟ್ಟೆಯ ಅಗ್ರಸ್ಥಾನದಲ್ಲಿದ್ದ  ಬಳಿಕ ಭಾರ್ತಿ ಏರ್ಟೆಲ್ ಸಂಸ್ಥೆ 2ನೇ ಸ್ಥಾನಕ್ಕಿಳಿದಿದೆ. ಇದೀಗ ವೋಡಾಫೋನ್ -ಐಡಿಯಾ ನಡುವಿನ ವಿಲೀನಕ್ಕೆ ನ್ಯಾಷನಲ್ ಕಂಪನಿ ಲಾ ಟ್ರಿಬ್ಯೂನಲ್ (ಎನ್.ಸಿ.ಎಲ್.ಟಿ) ಒಪ್ಪಿಗೆ ನೀಡಿರುವುದರಿಂದ ಈ ಮಹತ್ತರ ಬದಲಾವಣೆಯಾಗಿದೆ.

ಭಾರತದ ಸುಮಾರು 37 ಬಿಲಿಯನ್ ಡಾಲರ್ ಟೆಲಿಕಾಂ ಸೇವಾ ಕ್ಷೇತ್ರದ ಮೇಲೆ ಹಿಡಿತ ಸಾಧಿಸಲು ಲಂಡನ್ ಮೂಲದ ವೊಡಾಫೋನ್ ಸಂಸ್ಥೆ ಮಹತ್ವದ ಹೆಜ್ಜೆ ಇಟ್ಟಿದೆ. ಆದಿತ್ಯಾ ಬಿರ್ಲಾ ಸಮೂಹದ ಐಡಿಯಾ ಸೆಲ್ಯುಲಾರ್ ಸಂಸ್ಥೆಯನ್ನು ತನ್ನ ತೆಕ್ಕೆಗೆ ಹಾಕಿಕೊಂಡಿದೆ.

ಟೆಲಿಕಾಂ ಮಾರುಕಟ್ಟೆಯಲ್ಲಿ ಶೇ.23ರಷ್ಟು ಪಾಲು ಹೊಂದಿರುವ ವೊಡಾಫೋನ್ ಹಾಗೂ ಶೇ.19ರಷ್ಟು ಪಾಲು ಹೊಂದಿರುವ ಐಡಿಯಾ ಸಂಸ್ಥೆಗಳು ಇದೀಗ ಒಂದಾಗಿದ್ದು, ಇನ್ಮುಂದೆ ವೋಡಾಫೋನ್ ಐಡಿಯಾ ಎಂದು ಕರೆಲಾಗುವುದು.

ಮಾರ್ಚ್ 2017 ರಿಂದ ಆರಂಭವಾದ ವಿಲೀನ ಪ್ರಕ್ರಿಯೆಗೆ ಈಗ ಅಂತಿಮ ರೂಪ ಸಿಕ್ಕಿದೆ ಎಂದು ತಿಳಿದುಬಂದಿದೆ. ಸಂಪೂರ್ಣ ವಿಲೀನದ ನಂತರ ವೋಡಾಫೋನ್ ಸಂಸ್ಥೆ ಶೇ 45.2 ರಷ್ಟು ಪಾಲು ಹಾಗೂ ಐಡೀಯಾ ಶೇ 26ರಷ್ಟು ಪಾಲು ಹೊಂದಲಿವೆ. ಬಲೇಶ್ ಶರ್ಮ ಅವರು ವಿಲೀನದ ಬಳಿಕ ಹೊಸ ಕಂಪನಿ ವೋಡಾಫೋನ್ ಐಡಿಯಾದ ಮುಖ್ಯಸ್ಥರಾಗಿ ಆಯ್ಕೆಯಾಗಿದ್ದಾರೆ. ವೋಡಾಫೋನ್ 15,000ಕ್ಕೂ ಅಧಿಕ ಬ್ರಾಂಡೆಡ್ ಸ್ಟೋರ್’ಗಳು ಹಾಗೂ 1.7 ಮಿಲಿಯನ್‍ಗೂ ಅಧಿಕ ಟಚ್ ಪಾಯಿಂಟ್’ಗಳನ್ನು ಹೊಂದಿದೆ.

ಹೀಗಾಗಿ, ವೊಡಾಫೋನ್ ಮಾರುಕಟ್ಟೆಯಲ್ಲಿ ಶೇ 43ರಷ್ಟು ಪಾಲು ಹೊಂದಿ ಅಗ್ರಸ್ಥಾನಕ್ಕೇರಲಿದೆ. ಸದ್ಯ ಶೇ.33ರಷ್ಟು ಪಾಲುಹೊಂದಿರುವ ಭಾರ್ತಿ ಏರ್ ಟೆಲ್ ಲಿಮಿಟೆಡ್ ಸಂಸ್ಥೆ ಅಗ್ರಸ್ಥಾನದಲ್ಲಿತ್ತು. (ಎನ್.ಬಿ)

Leave a Reply

comments

Related Articles

error: