ಮೈಸೂರು

ರಮಾಮಣಿ ಬಿ. ಅವರಿಗೆ ಪಿ.ಹೆಚ್.ಡಿ.ಪದವಿ

ಮೈಸೂರು, ಆ.31 : ಸಿಂಡಿಕೇಟಿನಿಂದ ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿಗಳಿಗೆ ದತ್ತವಾದ ಅಧಿಕಾರಕ್ಕನುಗುಣವಾಗಿ ಮತ್ತು ಪರೀಕ್ಷಾ ಮಂಡಳಿಯ ಶಿಫಾರಸ್ಸಿನ ಮೇರೆಗೆ ರಮಾಮಣಿ ಬಿ. ಅವರಿಗೆ ಪಿಎಚ್.ಡಿ. ಪದವಿ ಪ್ರಕಟಿಸಲಾಗಿದೆ.

ಡಾ. ಸಿ.ಪಿ. ರಾಮಶೇಷ್ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ “ಯೂಸ್ ಆಫ್ ಇ-ರಿಸೋರ್ಸಸ್ ಬೈ ದಿ ಫ್ಯಾಕಲ್ಟಿ ಅಂಡ್ ರಿಸರ್ಚ್ ಸ್ಕಾಲರ್ಸ್ ಆಫ್ ಸ್ಪೀಚ್ ಅಂಡ್ ಹಿಯರಿಂಗ್ ಇನ್ಸ್‍ಟಿಟೂಷನ್ಸ್ ಇನ್ ಇಂಡಿಯಾ-ಎ ಸ್ಟಡಿ”  (Use of E-Resources by the Faculty and Research Scholars of Speech and Hearing Institutions in India -A Study) ಕುರಿತು ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ವಿಷಯದಲ್ಲಿ ಸಾದರಪಡಿಸಿದ ಮಹಾ ಪ್ರಬಂಧವನ್ನು ಪಿಎಚ್.ಡಿ. ಪದವಿಗಾಗಿ ಅಂಗೀಕರಿಸಿದೆ. ರಮಾಮಣಿ ಬಿ. ಅವರು ಸದರಿ ಪಿ.ಎಚ್.ಡಿ.ಪದವಿಯನ್ನು ಮುಂದೆ ನಡೆಯುವ ವಾರ್ಷಿಕ ಘಟಿಕೋತ್ಸವದಲ್ಲಿ ಪಡೆಯಬಹುದಾಗಿದೆ ಎಂದು ವಿಶ್ವವಿದ್ಯಾಲಯದ ಪರೀಕ್ಷಾಂಗ ವಿಭಾಗದ ಕುಲಸಚಿವರು ತಿಳಿಸಿದ್ದಾರೆ. (ಕೆ.ಎಂ.ಆರ್)

Leave a Reply

comments

Related Articles

error: