ಮೈಸೂರು

ಕುರಿ ಉಣ್ಣೆ ಅಭಿವೃದ್ಧಿ ನಿಗಮ : ಸಹಾಯಧನಕ್ಕೆ ಅರ್ಜಿ ಆಹ್ವಾನ

ಮೈಸೂರು,ಆ.31 : ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ದ ವತಿಯಿಂದ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆಯಡಿಯಲ್ಲಿ ಹಾಗೂ ವಿಶೇಷ ಘಟಕ ಯೋಜನೆ ಮತ್ತು ಗಿರಿಜನ ಉಪಯೋಜನೆಯಡಿ (10+01) ಕುರಿ/ಮೇಕೆ ಘಟಕಗಳ ಅನುಷ್ಟಾನಕ್ಕಾಗಿ ಮೈಸೂರು, ಚಾಮರಾಜನಗರ ಹಾಗು ಕೊಡಗು ಜಿಲ್ಲೆಯ ನಿಗಮದಲ್ಲಿ ನೊಂದಾಯಿತ ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳಲ್ಲಿ ಸದಸ್ಯರಾಗಿರುವ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ವರ್ಗದವರ ಸದಸ್ಯರುಗಳಿಂದ ಸಹಾಯಧನಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ.
ಅರ್ಜಿ ಸಲ್ಲಿಸುವವರು ಇಲಾಖೆ/ನಿಗಮದಿಂದ ಮೂರು ವರ್ಷಗಳಲ್ಲಿ ಯಾವುದೇ ಸಹಾಯಧನ ಸೌಲಭ್ಯ ಪಡೆದಿರಬಾರದು. ಬಿ.ಪಿ.ಎಲ್ ಆಹಾರ ಪಡಿತರ ಚೀಟಿಯನ್ನು ಹೊಂದಿರಬೇಕು.  ಕುರಿ/ಮೇಕೆ ಸಾಕಾಣಿಕೆಯಲ್ಲಿ ತರಬೇತಿ ಪಡೆದಿರಬೇಕು. ಆಸಕ್ತ ಫಲಾನುವಿಭಗಳು ಕುರಿ ಮತ್ತು ಉಣ್ಣೆ ಉತ್ಪಾದಕರ ಸಹಕಾರ ಸಂಘಗಳ ಮೂಲಕ ಸಹಾಯಕ ನಿರ್ದೇಶಕರು, ಕರ್ನಾಟಕ ಕುರಿ ಮತ್ತು ಉಣ್ಣೆ ಅಭಿವೃದ್ಧಿ ನಿಗಮ ನಿ., ಮಾನಂದವಾಡಿ ರಸ್ತೆ ಚಾಮುಂಡಿಪುರಂ ಮೈಸೂರು ರವರಿಗೆ 30-09-2018 ರ ಒಳಗಾಗಿ ಅರ್ಜಿ ಸಲ್ಲಿಸುವುದು.
ಆಯ್ಕೆ ಸಮಿತಿಯಲ್ಲಿ ಫಲಾನುಭವಿಯನ್ನಾಗಿ ಆಯ್ಕೆ ಮಾಡಲಾಗುವುದು. ಹೆಚ್ಚಿನ ಮಾಹಿತಿಗೆ ದೂರವಾಣಿ ಸಂಖ್ಯೆ:0821 2488830 ಸಂಪರ್ಕಿಸುವುದು.(ಕೆ.ಎಂ.ಆರ್)

Leave a Reply

comments

Related Articles

error: