ಮೈಸೂರು

ಪಾಲಿಕೆ ಅಧಿಕಾರಿಗಳ ಅಸಡ್ಡೆಯಿಂದ ನೀರಸ ಮತದಾನ : ಸಂಸದ ಪ್ರತಾಪ್ ಸಿಂಹ ಅಸಮಾಧಾನ

ಮೈಸೂರು,ಸೆ.1:- ಪಾಲಿಕೆ ಅಧಿಕಾರಿಗಳ ಅಸಡ್ಡೆಯಿಂದ  ಮೈಸೂರು ನಗರ ಪಾಲಿಕೆ ಚುನಾವಣೆಯಲ್ಲಿ  ನೀರಸ ಮತದಾನ ವಾಗಿದೆ ಎಂದು ಸಂಸದ ಪ್ರತಾಪ್ ಸಿಂಹ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಿನ್ನೆ ಈ ಬಗ್ಗೆ ಮಾತನಾಡಿದ ಸಂಸದ ಪ್ರತಾಪ್ ಸಿಂಹ, ನಗರ ಪಾಲಿಕೆಯ ವಾರ್ಡ್ ಮರುವಿಂಗಡಣೆ ಆದರೂ ಮತದಾರರ ಪಟ್ಟಿ ಗೊಂದಲ ನಿವಾರಿಸಲು ಸಿಬ್ಬಂದಿ ವಿಫಲರಾದರು.ಮನೆ ಮನೆಗೆ ತೆರಳಿ ಓಟ್  ಲೀಸ್ಟ್ ಕೊಟ್ಟಿದ್ದೀವಿ ಎನ್ನುತ್ತಾರೆ. ಇಲ್ಲಿ ನೋಡಿದರೆ ಯಾರಿಗೂ ಮಾಹಿತಿಯೇ ಇಲ್ಲ. ಆ ಬೂತ್ ಈ ಬೂತ್ ಅಂತಾ ಅಲೆದು ಜನ ಹೈರಾಣಾದರು ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮತ್ತೊಂದೆಡೆ ಪ್ರಜ್ಞಾವಂತ ಮತದಾರರು , ವಿದ್ಯಾವಂತರು ಮನೆಯಿಂದ ಬಂದು ಮತ ಚಲಾಯಿಸಬೇಕು. ಸಂಸದರು ಶಾಸಕರ ಆಯ್ಕೆಗೆ ತೋರಿಸೋ ಆಸಕ್ತಿ ಸ್ಥಳಿಯ ಜನಪ್ರತಿನಿಧಿಗಳ ಆಯ್ಕೆಗೂ ತೋರಿಸಬೇಕು ಎಂದು ಮನವಿ ಮಾಡಿದ ಸಂಸದ ಪ್ರತಾಪ್ ಸಿಂಹ, ಈ ಭಾರಿ ಬಿಜೆಪಿ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲಿದೆ. ಎರಡು ಕ್ಷೇತ್ರದಲ್ಲಿ ನಮ್ಮ ಪಕ್ಷದ ಶಾಸಕರೇ ಆಯ್ಕೆ ಆಗಿದ್ದಾರೆ ಎಂದರು. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: