ಮೈಸೂರು

ನಾಳೆ ಸಿಗಲಿದೆ ಗಜಪಯಣಕ್ಕೆ ಚಾಲನೆ : ಕಾವಾಡಿ-ಮಾವುತರಿಗೆ ಶೆಡ್ ಗಳ ನಿರ್ಮಾಣ

ಮೈಸೂರು,ಸೆ.1:- ವಿಶ್ವ ವಿಖ್ಯಾತ ನಾಡ ಹಬ್ಬ ಮೈಸೂರು  ದಸರಾ ಮಹೋತ್ಸವ-2018ಕ್ಕೆ ಈಗಾಗಲೇ ಸಿದ್ಧತೆಗಳು ನಡೆಯುತ್ತಿದ್ದು, ನಾಳೆ ಮೈಸೂರಿನತ್ತ ಗಜಪಡೆ ಹೆಜ್ಜೆ ಹಾಕಲಿವೆ.

ಸೆ.2 ರಂದು ವೀರನಹೊಸಳ್ಳಿಯಿಂದ ಗಜಪಡೆ ಆಗಮಿಸಲಿದ್ದು, ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರು ಗಜಪಯಣಕ್ಕೆ ಚಾಲನೆ ನೀಡಲಿದ್ದಾರೆ. ಇತ್ತ ಮೈಸೂರಿನ ಅರಮನೆ ಆವರಣದಲ್ಲಿ ಗಜಪಡೆ ಹಾಗೂ ಮಾವುತರ ಕುಟುಂಬಗಳಿಗೆ ತಾತ್ಕಾಲಿಕ ಶೆಡ್ ನಿರ್ಮಾಣ ಮಾಡಲಾಗಿದೆ. ಎಂಟು ಶೆಡ್ ಗಳ ನಿರ್ಮಾಣ ನಡೆಯುತ್ತಿದೆ. ಕಾವಾಡಿ ಹಾಗೂ ಮಾವುತರ ಮಕ್ಕಳು ತಿಂಗಳುಗಳ ಕಾಲ ಅರಮನೆಯ ಆವರಣದಲ್ಲಿ ಉಳಿಯುವ ಕಾರಣ ಕಾವಾಡಿಗರು ಹಾಗೂ ಮಾವುತರ ಮಕ್ಕಳಿಗಾಗಿ ತಾತ್ಕಾಲಿಕ ಶಾಲೆ ಕೂಡ ನಿರ್ಮಾಣವಾಗುತ್ತಿದೆ. ಕಾವಾಡಿ ಹಾಗೂ ಮಾವುತರ ತಂಡಕ್ಕೆ ತಾತ್ಕಾಲಿಕ ಶೆಡ್‌ ನಿರ್ಮಾಣವಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: