ಮೈಸೂರು

ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರ : ಮಹಾರಾಣಿ ಕಾಲೇಜು ಸುತ್ತ ಪೊಲೀಸ್ ಬಿಗಿಭದ್ರತೆ

ಮೈಸೂರು,ಸೆ.1:-  ಮೈಸೂರು ಮಹಾನಗರಪಾಲಿಕೆಗೆ ಆ.31ರಂದು ನಡೆದ ಚುನಾವಣೆ ಗಹಲವೆಡೆ ಶಾಂತಿಯುವಾಗಿ ನಡೆದಿದ್ದು, ಇನ್ಕೆಲವು ಕಡೆ ಗದ್ದಲ ಗಲಾಟೆಗಳ ನಡುವೆ ಮುಕ್ತಾಯಗೊಂಡಿದ್ದು, ಮತಯಂತ್ರಗಳು ನಗರದ ವಾಲ್ಮೀಕಿ ರಸ್ತೆಯಲ್ಲಿರುವ ಮಹಾರಾಣಿ ವಾಣಿಜ್ಯ ಕಾಲೇಜಿನ ಕಟ್ಟಡದಲ್ಲಿನ ಭದ್ರತಾ ಕೊಠಡಿ ಸೇರಿವೆ.

ಐದು ಗಂಟೆಯಾಗುತ್ತಿದ್ದಂತೆಯೇ ಮತ ಯಂತ್ರ ಮತ್ತಿತರ ಸಾಮಗ್ರಿಗಳನ್ನು ಹೊತ್ತ ಮತಗಟ್ಟೆಯ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ಆಗಮಿಸಿ ಚುನಾವಣಾಧಿಕಾರಿಗಳಿಗೆ ಮತ ಯಂತ್ರಗಳನ್ನು ಒಪ್ಪಿಸಿದರು. ನಂತರ ಮೊಹರು ಹಾಕಲಾಗಿದ್ದು, ಶಸ್ತ್ರ ಸಜ್ಜಿತ ಪೊಲೀಸ್ ಪಹರೆ ಹಾಕಲಾಗಿತ್ತು. ಜಿಲ್ಲಾಧಿಕಾರಿ ಅಭಿರಾಮ್ ಜಿ.ಶಂಕರ್, ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣ್ಯೇಶ್ವರರಾವ್ ಭದ್ರತೆಯನ್ನು ಖಾತ್ರಿಪಡಿಸಿಕೊಂಡಿದ್ದಾರೆ.

ಮತಪೆಟ್ಟಿಗೆಯಲ್ಲಿ ಅಭ್ಯರ್ಥಿಗಳ ಭವಿಷ್ಯ ಭದ್ರವಾಗಿದ್ದು, ಸ್ಟ್ರಾಂಗ್ ರೂಂನಲ್ಲಿ ಮತಪೆಟ್ಟಿಗೆಗಳು ಭದ್ರವಾಗಿವೆ. ಸೆ.3ರಂದು ಮತ ಎಣಿಕೆ ನಡೆಯಲಿದೆ. ಮಹಾರಾಣಿ ಕಾಲೇಜು ಸುತ್ತ ಪೊಲೀಸ್ ಬಿಗಿಭದ್ರತೆಯನ್ನು ಏರ್ಪಡಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: