ಮೈಸೂರು

ಮ್ಯಾನ್ ಹೋಲ್ ಕುಸಿದು ಹಳ್ಳ : ಗಮನ ಹರಿಸದ ಅಧಿಕಾರಿಗಳ ಕ್ರಮಕ್ಕೆ ಖಂಡನೆ

ಮೈಸೂರು,ಸೆ.1:-  ನಗರದ ಹೃದಯ ಭಾಗವಾದ ವಾರ್ಡ ನಂಬರ್ 50 ರ ನಾರಾಯಣ ಶಾಸ್ತ್ರಿ ರಸ್ತೆ, ಸಿದ್ದಪ್ಪ ವೃತ್ತದ ಬಳಿಯಿರುವ ತ್ರಿಲೋಕ ಬಾರ್ ಮುಂಭಾಗ ಮ್ಯಾನ್ ಹೋಲ್ ಕುಸಿದು ಹಳ್ಳ ವಾಗಿ ಸುಮಾರು ಹದಿನೈದು ದಿನ ಕಳೆದರೂ ಇದರ ಕಡೆ ಯಾವ ಜನಪ್ರತಿನಿಧಿಗಳು ಹಾಗೂ  ಅಧಿಕಾರಿಗಳು ಗಮನ ಹರಿಸಿಲ್ಲವೆಂದು ಆರೋಪಿಸಿ ಅಧಿಕಾರಿಗಳ ಕ್ರಮವನ್ನು ಯುವ ಭಾರತ್ ಸಂಘಟನೆಯ ಸಂಚಾಲಕ ಜೋಗಿ ಖಂಡಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ರಸ್ತೆ ಯಲ್ಲಿ ಲಕ್ಷಾಂತರ ಜನರು ಓಡಾಡುತ್ತಾರೆ. ಅತಿ ಹೆಚ್ಚು ಜನನಿ ಬಿಡ ಪ್ರದೇಶವಾಗಿದೆ.  ಶಾಲಾ ಕಾಲೇಜು ಇರುವುದರಿಂದ ಮಕ್ಕಳು ದಿನನಿತ್ಯ ಓಡಾಡುತ್ತಾರೆ. ಹದಿನೈದು ದಿನದಿಂದ ಈ ಭಾಗದ ಜನರ ಕಷ್ಟ ಹೇಳತೀರದಾಗಿದೆ. ಈ ಭಾಗದ ಜನರ ಕಷ್ಟ ಕ್ಕೆ ಈಗಲಾದರೂ ಜನಪ್ರತಿನಿಧಿಗಳು ಅಧಿಕಾರಿಗಳು ಸ್ಪಂದಿಸಬೇಕೆಂದು ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: