ಮೈಸೂರು

ಅರಣ್ಯದಲ್ಲಿ ಹೆಬ್ಬಾವಿಗೆ ಹೆದರಿದ ಹುಲಿರಾಯ !

ಮೈಸೂರು,ಸೆ.1:- ಅರಣ್ಯದಲ್ಲಿ ಹೆಬ್ಬಾವಿಗೆ ಹುಲಿರಾಯ ಹೆದರಿದ ಘಟನೆ ನಡೆದಿದ್ದು, ಸಫಾರಿಗೆ ಹೊರಟವರ ಕ್ಯಾಮರಾದಲ್ಲಿ ಸೆರೆಯಾಗಿದೆ.

ಸಫಾರಿಗೆ ತೆರಳಿದ ಪ್ರವಾಸಿಗರ ಕ್ಯಾಮರಾಕ್ಕೆ ಅಪರೂಪದ ದೃಶ್ಯವೊಂದು ಸೆರೆ ಸಿಕ್ಕಿದ್ದು, ಕಬಿನಿ ಅರಣ್ಯ ಪ್ರದೇಶದಲ್ಲಿನ  ನಾಗರಹೊಳೆ ಅರಣ್ಯ ವ್ಯಾಪ್ತಿಯಲ್ಲಿ ಅಪರೂಪದ ಘಟನೆ ನಡೆದಿದೆ.ತನ್ನ ಎದುರಿಗೆ ಬಂದ ಹೆಬ್ಬಾವು ಕಂಡು ಹುಲಿಯೊಂದು ಹೆದರಿದಂತೆ  ಹಿಂದೆ ಸರಿದಿದ್ದು, ಕ್ಯಾಮರಾದಲ್ಲಿ  ಅಪರೂಪದ ದೃಸ್ಯವೊಂದು ಸೆರೆಯಾಗಿದೆ. ಸಫಾರಿಗೆ ತೆರಳಿದರೆ ಹುಲಿಗಳೇ ಕಾಣಿಸುವುದು ಅಪರೂಪ ಅಂಥಹುದರಲ್ಲಿ ಹೆಬ್ಬಾವು ಮತ್ತು ಹುಲಿಯನ್ನು ಕಂಡ ಪ್ರವಾಸಿಗರು ಫುಲ್ ಖುಷ್ ಆಗಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: