ಕ್ರೀಡೆ

ಬಾಕ್ಸಿಂಗ್ ನಲ್ಲಿ ಭಾರತಕ್ಕೆ ಚಿನ್ನ

ವಿದೇಶ(ಜಕಾರ್ತ)ಸೆ.1:- ಇಂಡೋನೇಷಿಯಾದ ಜಕಾರ್ತದಲ್ಲಿ ನಡೆಯುತ್ತಿರುವ ಏಷ್ಯನ್ ಗೇಮ್ಸ್ ನ 14ನೇ ದಿನ ಭಾರತೀಯರಿಗೆ ಬಾಕ್ಸರ್ ಅಮಿತ್ ಪಂಘಲ್ ಸಿಹಿಸುದ್ದಿ ನೀಡಿದ್ದಾರೆ.

ಇಂದು ಭಾರತಕ್ಕೆ ಎರಡು ಸ್ವರ್ಣ ಪದಕಗಳು ಲಭಿಸಿದ್ದು, ಪುರುಷರ 49ಕಿಲೋ ಬಾಕ್ಸಿಂಗ್ ಸ್ಪರ್ಧೆಯ ಫೈನಲ್ ನಲ್ಲಿ ಭಾರತದ ಅಮಿತ್ ಉಜ್ಬೇಕಿಸ್ತಾನದ ಹಸನ್ ಬೋಯ್ ಡುಸ್ಮಟೋವ್ ವಿರುದ್ಧ ಸೆಣೆಸಿ ರೋಚಕ ಗೆಲುವು ಸಾಧಿಸಿದರು. ನಿನ್ನೆ ಚಿನ್ನದ ನಿರೀಕ್ಷೆ ಮೂಡಿಸಿದ್ದ ಇನ್ನೊಬ್ಬ ಬಾಕ್ಸರ್ ವಿಕಾಸ್ ಕೃಷ್ಣನ್ ಗಾಯದ ಕಾರಣದಿಂದ ಸೆಮಿಫೈನಲ್ ಅಖಾಡಕ್ಕೆ ಇಳಿಯದೇ ಕಂಚಿಗೆ ತೃಪ್ತಿಪಟ್ಟರು. ಭಾರತೀಯರ ಖಾತೆಯಲ್ಲಿ ಒಟ್ಟು 66ಪದಕ ಸಿಕ್ಕಂತಾಗಿದೆ. 2010ರಲ್ಲಿ ಗುವಾಂಗ್ಝೌ ನಲ್ಲಿ ನಡೆದ ಏಷ್ಯನ್  ಗೇಮ್ಸ್ ನಲ್ಲಿ ಒಟ್ಟು 65 ಪದಕಗಳನ್ನು ಪಡೆದಿತ್ತು. ಇದೀಗ ಆ ದಾಖಲೆಯನ್ನೂ ಮುರಿದಂತಾಗಿದೆ. (ಎಸ್.ಎಚ್)

Leave a Reply

comments

Related Articles

error: