ಸುದ್ದಿ ಸಂಕ್ಷಿಪ್ತ

ಗರ್ವಾಲೆಗೆ ಬಸ್ ಸೌಲಭ್ಯ

ಮಡಿಕೇರಿ ಸೆ.1 :-  ಗರ್ವಾಲೆ ಗ್ರಾ.ಪಂ.ವ್ಯಾಪ್ತಿಗೆ ಬರುವ ಸೂರ್ಲಬ್ಬಿ, ಮಂಕ್ಯ, ಕುಂಬಾರಗಡಿಗೆ, ಕಿಕ್ಕರಳ್ಳಿ ಗ್ರಾಮಕ್ಕೆ ಈ ಹಿಂದೆ ದಿನದ ಮೂರು ಬಾರಿ ಕಲ್ಪಿಸಲಾಗಿದ್ದ ಮಿನಿ ಬಸ್ ಸೌಲಭ್ಯವನ್ನು ಮುಂದುವರಿಸಲಾಗುವುದು ಎಂದು ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ಬಸ್ ಡಿಪೋ ವ್ಯವಸ್ಥಾಪಕಿ ಗೀತಾ ಅವರು ತಿಳಿಸಿದ್ದಾರೆ.

ಮಧ್ಯಾಹ್ನದ ವೇಳೆಯಲ್ಲಿ ಈ ಭಾಗಕ್ಕೆ ಬಸ್ ಅಗತ್ಯವಿಲ್ಲ ಎಂದು ಕೆಲವರಿಂದ ಕೇಳಿ ಬಂದ ಹಿನ್ನೆಲೆ ಸ್ಥಗಿತಗೊಳಿಸಲಾಗಿತ್ತು, ಈಗ ಮಧ್ಯಾಹ್ನದ ವೇಳೆಯಲ್ಲಿ ಬಸ್ ಸೌಲಭ್ಯ ಕಲ್ಪಿಸಬೇಕು ಎಂದು ಒತ್ತಾಯಿಸಿರುವುದರಿಂದ ಸೋಮವಾರಪೇಟೆ ಬಸ್ ನಿಲ್ದಾಣದಿಂದ ಮಧ್ಯಾಹ್ನ 1 ಗಂಟೆಗೆ ಕಿಕ್ಕರಳ್ಳಿ, ಸೂರ್ಲಬ್ಬಿ ಮಾರ್ಗ ಗರ್ವಾಲೆಗೆ ಮಿನಿ ಬಸ್ ಸಂಚರಿಸಲಿದೆ. ಹಾಗೆಯೇ ವಾಪಸ್ಸು ಅದೇ ಮಾರ್ಗದಲ್ಲಿ ಸೋಮವಾರಪೇಟೆಗೆ ಬರಲಿದೆ ಎಂದು ಗೀತಾ ಅವರು ತಿಳಿಸಿದ್ದಾರೆ. ಉಳಿದಂತೆ ಬೆಳಗ್ಗೆ ಮತ್ತು ಸಂಜೆ ವೇಳೆಯಲ್ಲಿ ಬಸ್ ಓಡಾಡಲಿದೆ ಎಂದು ಮಡಿಕೇರಿ ಕೆ.ಎಸ್.ಆರ್.ಟಿ.ಸಿ. ವ್ಯವಸ್ಥಾಪಕರು ಮಾಹಿತಿ ನೀಡಿದ್ದಾರೆ.   (ಕೆಸಿಐ,ಎಸ್.ಎಚ್)

Leave a Reply

comments

Related Articles

error: