ಪ್ರಮುಖ ಸುದ್ದಿ

ಸರಕಾರದ ಅನುದಾನ ಆಧರಿಸಿ ದಸರಾ ಆಚರಣೆ : ಮಡಿಕೇರಿ ದಸರಾ ದಶಮಂಟಪ ಸಮಿತಿ ಚಿಂತನೆ

ರಾಜ್ಯ(ಮಡಿಕೇರಿ) ಸೆ.1 :- ಮಹಾಮಳೆಯಿಂದ ಕೊಡಗು ಜಿಲ್ಲೆ ತತ್ತರಿಸಿ ಹೋಗಿದ್ದು, ಹಲವು ಮಂದಿ ಸಂತ್ರಸ್ತರಾಗಿದ್ದಾರೆ. ಈ ಹಿನ್ನೆಲೆಯಲ್ಲಿ ಮಡಿಕೇರಿ ದಸರಾ ಮಂಟಪಗಳ ಶೋಭಾಯಾತ್ರೆಯನ್ನು ಸರಕಾರದ ಅನುದಾನವನ್ನು ಆಧರಿಸಿ ನಡೆಸಲು ದಶಮಂಟಪ ಸಮಿತಿ ಚಿಂತನೆ ನಡೆಸಿದೆ.

ಸಮಿತಿಯ ನೂತನ ಅಧ್ಯಕ್ಷ ದೇಚೂರು ಶ್ರೀರಾಮಮಂದಿರ ದೇವಾಲಯದ ರವಿಕುಮಾರ್ ಅವರ ಅಧ್ಯಕ್ಷತೆಯಲ್ಲಿ ಕಾವೇರಿ ಕಲಾಕ್ಷೇತ್ರದಲ್ಲಿ ನಡೆದ ಸಭೆಯಲ್ಲಿ ದಸರಾ ಆಚರಣೆ ಕುರಿತು ಚರ್ಚಿಸಲಾಯಿತು. ಪ್ರಕೃತಿ ವಿಕೋಪದಿಂದ ಮಡಿಕೇರಿ ತಾಲ್ಲೂಕು ಕಷ್ಟನಷ್ಟಗಳನ್ನು ಅನುಭವಿಸುತ್ತಿರುವ ಬಗ್ಗೆ ಬೇಸರ ವ್ಯಕ್ತಪಡಿಸಿದ ಹಲವರು ಪ್ರತಿ ವರ್ಷದಂತೆ ಈ ಬಾರಿ ಕೂಡ ಅದ್ದೂರಿ ದಸರಾ ಉತ್ಸವ ಅಸಾಧ್ಯವೆಂದು ಅಭಿಪ್ರಾಯಪಟ್ಟರು.

ಜಿಲ್ಲೆ ಸಂಕಷ್ಟದಲ್ಲಿರುವುದರಿಂದ ಈ ಬಾರಿಯ ದಸರಾ ಹಬ್ಬವನ್ನು ಸರಳ ರೀತಿಯಲ್ಲಿ ಆಚರಿಸುವ ಕುರಿತು ಚಿಂತಿಸುವುದು ಮತ್ತು ಸರಕಾರ ನೀಡುವ ಅನುದಾನವನ್ನು ಆಧರಿಸಿ ದಶಮಂಟಪ ಶೋಭಾಯಾತ್ರೆಯ ಬಗ್ಗೆ ಮುಂದಿನ ದಿನಗಳಲ್ಲಿ ನಿರ್ಧಾರ ತೆಗೆದುಕೊಳ್ಳಲು ವಿವಿಧ ದೇವಾಲಯಗಳ ಪದಾಧಿಕಾರಿಗಳು ಸಲಹೆ ನೀಡಿದರು.  (ಕೆಸಿಐ,ಎಸ್.ಎಚ್)

Leave a Reply

comments

Related Articles

error: