ಪ್ರಮುಖ ಸುದ್ದಿ

ಕೋಟ್ ನಲ್ಲಿ ಕಾಣಿಸಿಕೊಂಡ ಮಾಜಿ ಸಿಎಂ ಸಿದ್ದರಾಮಯ್ಯ : ಕುಟುಂಬದೊಂದಿಗೆ ಹೊರಟರು ಯುರೋಪ್ ಪ್ರವಾಸ

ರಾಜ್ಯ(ಬೆಂಗಳೂರು)ಸೆ.3:- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ಯಾಂಟ್, ಕೋಟುಗಳನ್ನು ಧರಿಸಿದ್ದನ್ನು ಜನರು ನೋಡಿದ್ದೇ ಕಡಿಮೆ. ಸದಾ ಬಿಳಿ ಪಂಚೆ, ಶರ್ಟ್, ಹೆಗಲಿಗೊಂದು ಬಿಳಿ ಶಾಲಿನಲ್ಲಿಯೇ ಕಾಣಿಸಿಕೊಳ್ಳುತ್ತಿದ್ದ ಸಿದ್ದರಾಮಯ್ಯನವರಿಂದು ಕೋಟ್ ನಲ್ಲಿ ಕಾಣಿಸಿಕೊಂಡರು.

ವಿದೇಶ ಪ್ರವಾಸಗಳಿಂದ ದೂರವೇ ಉಳಿದಿದ್ದ ಅವರು ಒಂದೆರಡು ಬಾರಿಯಷ್ಟೇ ವಿದೇಶ ಪ್ರವಾಸ ಕೈಗೊಂಡಿದ್ದರು. ಅದರಲ್ಲೂ ಕುಟುಂಬದೊಂದಿಗೆ ಕಾಣಿಸಿಕೊಂಡಿದ್ದು ಕೂಡ ವಿರಳವೇ. ಇತ್ತೀಚೆಗೆ ವಿಧಾನಸಭಾ ಚುನಾವಣೆ ನಡೆದು ಕಾಲಿಗೆ ಚಕ್ರ ಕಟ್ಟಿಕೊಂಡಂತೆ ತಿರುಗಿದ ಸಿದ್ದರಾಮಯ್ಯ ಬದಾಮಿ ಕ್ಷೇತ್ರದ ಶಾಸಕರಾಗಿ ಆಯ್ಕೆಯಾದರು. ಇದೀಗ ಬಿಡುವು ಮಾಡಿಕೊಂಡು ತಮ್ಮ ಕುಟುಂಬಕ್ಕೆ ಸಮಯ ನೀಡಲು ಮುಂದಾಗಿರುವ ಅವರು ವಿದೇಶ ಪ್ರವಾಸ ಕೈಗೊಂಡಿದ್ದಾರೆ. ಇಂದಿನಿಂದ ಹತ್ತು ದಿನಗಳ ಕಾಲ ಯುರೋಪ್ ಪ್ರವಾಸ ಕೈಗೊಂಡಿದ್ದು, ಪತ್ನಿ ಪಾರ್ವತಿ, ಪುತ್ರ ಡಾ.ಯತೀಂದ್ರ, ಪುತ್ರ ರಾಕೇಶ್ ಪತ್ನಿ ಸ್ಮಿತಾ ಮತ್ತವರ ಮಕ್ಕಳೊಂದಿಗೆ ಕಾಲಕಳೆಯಲಿದ್ದಾರೆ.

ಸೂಟು,ಬಿಳಿ ಶರ್ಟ್, ಶೂ ಹಾಗೂ ಕೋಟು ಧರಿಸಿ ಯುರೋಪ್ ಪ್ರವಾಸ ಕೈಗೊಂಡ ಇವರ ವಿದೇಶ ಪ್ರವಾಸಕ್ಕೆ ಶುಭ ಹಾರೈಸಲು ಸಚಿವ ಜಮೀರ್ ಅಹ್ಮದ್, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ಸೇರಿದಂತೆ ಹಲವರು ಆಗಮಿಸಿ ಶುಭ ಹಾರೈಸಿಸಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: