ಮೈಸೂರು

ಆದಿವಾಸಿಗಳ ಹಕ್ಕು ಅನುಷ್ಠಾನಕ್ಕೆ ಒತ್ತಾಯ : ಪ್ರತಿಭಟನೆ

ರಾಜ್ಯದ ಎಲ್ಲಾ ಮೂಲ ಬುಡಕಟ್ಟುಗಳು ಸಮಾನವಾಗಿ ಸಂವಿಧಾನಬದ್ಧ ಹಕ್ಕನ್ನು ಪಡೆಯಬೇಕೆಂಬುದು ಆದಿವಾಸಿಗಳ ಆಶಯವಾಗಿದ್ದು, ಆದಿವಾಸಿ ಹಕ್ಕುಗಳ ಅನುಷ್ಠಾನಕ್ಕೆ ಒತ್ತಾಯಿಸಿ ಕರ್ನಾಟಕ ಆದಿವಾಸಿ ರಕ್ಷಣಾ ಪರಿಷತ್ ವತಿಯಿಂದ ಶುಕ್ರವಾರ ಮೈಸೂರಿನಲ್ಲಿ ಪ್ರತಿಭಟನೆ ನಡೆಯಿತು.

ಮೈಸೂರಿನ ಜಿಲ್ಲಾಧಿಕಾರಿಗಳ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಪಾಲ್ಗೊಂಡ ಪ್ರತಿಭಟನಾಕಾರರು ಸಮಾಜದಲ್ಲಿ ಅತ್ಯಂತ ಹೆಚ್ಚು ಶೋಷಣೆಗೆ ಹಾಗೂ ದೌರ್ಜನ್ಯಕ್ಕೆ ಆದಿವಾಸಿಗಳು ಬಲಿಯಾಗುತ್ತಿದ್ದಾರೆ. ಸಂವಿಧಾನದಲ್ಲಿ ಆದಿವಾಸಿಗಳಿಗೆ ಎಲ್ಲಾ ವಿಧವಾದ ರಕ್ಷಣೆಯ ಭರವಸೆ ನೀಡುತ್ತಿದೆ. ಆದರೆ ಯಾವ ಭರವಸೆಗಳೂ ಇಲ್ಲಿಯವೆರೆಗೆ ಈಡೇರಿಲ್ಲ. ಮೂಲ ಆದಿವಾಸಿಗಳನ್ನು ಸರ್ಕಾರ ನೋಡುವ ದೃಷ್ಟಿಯೇ ಬೇರೆಯಾಗಿದೆ. ಅರಣ್ಯ ಇಲಾಖಾಧಿಕಾರಿಗಳು ಅನಗತ್ಯವಾಗಿ ಸುಳ್ಳು ಮೊಕದ್ದಮೆಗಳನ್ನು ನೋಂದಾಯಿಸುತ್ತಾ ಆದಿವಾಸಿಗಳನ್ನು ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಆರೋಪಿಸಿದರು.

ಆದಿವಾಸಿಗಳಗಾಗಿ ಘೋಷಣೆಯಾದ ಯೋಜನೆಗಳು ಅನುಷ್ಠಾನಗೊಳ್ಳದೇ ಘೋಷಣೆಯಾಗೇ ಉಳಿದಿವೆ. ನಮ್ಮ ಹಕ್ಕುಗಳನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.

ಪ್ರತಿಭಟನೆಯಲ್ಲಿ ಪರಿಷತ್ ನ ಜಿಲ್ಲಾ ಪದಾಧಿಕಾರಿ ನಟರಾಜು, ಪ್ರಧಾನ ಕಾರ್ಯದರ್ಶಿ ಕಾಳಯ್ಯ ಸೇರಿದಂತೆ ನೂರಾರು ಕಾರ್ಯಕರ್ತರು ಪಾಲ್ಗೊಂಡಿದ್ದರು.

Leave a Reply

comments

Related Articles

error: