ಕರ್ನಾಟಕ

ನೆಹರು ವಿರುದ್ಧ ವಾಗ್ದಾಳಿ ನಡೆಸಿದ ಅನಂತ್ ಕುಮಾರ್ ಹೆಗಡೆ

ಬೆಂಗಳೂರು (ಸೆ.3): ದೇಶದ ಪ್ರಥಮ ಪ್ರಧಾನಿ ಜವಹರಲಾಲ್ ನೆಹರು ವಿರುದ್ಧ ಸಂಸದ ಅನಂತ್ ಕುಮಾರ್ ಹೆಗಡೆ ವಾಗ್ದಾಳಿ ನಡೆಸಿದ್ದಾರೆ. “ಸ್ವಾತಂತ್ರ್ಯದ ಸಂದರ್ಭದಲ್ಲಿ ಯಾರದ್ದೋ ತೀಟೆಗೆ ಅಂದಿನ ನಾಯಕತ್ವ ಹೇಡಿತನದ, ದುರ್ಬಲ ಪ್ರಧಾನಿಯನ್ನು ಆಯ್ಕೆ ಮಾಡಲು ನಡೆಸಿದ ದೇಶ ವಿಭಜನೆಯನ್ನು ಒಪ್ಪಲು ಸಾಧ್ಯವೇ ಇಲ್ಲ. ಮುಂದೊಂದು ದಿನ ಒಡೆದು ಹೋಗಿರುವ ಭಾರತದ ಜಾಗ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ”ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಪರೋಕ್ಷವಾಗಿ ಮಾಜಿ ಪ್ರಧಾನಿ ಜವಾಹರಲಾಲ್ ನೆಹರೂ ವಿರುದ್ಧ ಕಟುವಾಗಿ ವಾಗ್ದಾಳಿ ನಡೆಸಿದ್ದಾರೆ.

ಜಾಗೃತ ಭಾರತಿ ಪ್ರಕಾಶನ ವತಿಯಿಂದ ನಗರದ ಡಿ.ವಿ.ಜಿ ರಸ್ತೆಯ ಅಬಲಾಶ್ರಮದಲ್ಲಿ ಭಾನುವಾರ ಆಯೋಜಿಸಲಾಗಿದ್ದ ‘ವಿಭಜಿತ ಭಾರತ- 1947’ ಉಪನ್ಯಾಸ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಇವತ್ತಿನ ಬಹುತೇಕ ರಾಜಕಾರಣಿಗಳು, ಬುದ್ಧಿಜೀವಿಗಳು, ಬರಹಗಾರರಿಗೆ ಇತಿಹಾಸವೇ ಗೊತ್ತಿಲ್ಲ. ಹೀಗಾಗಿ ಅವರು ಬಾಯಿಗೆ ಬಂದಂತೆ ಮಾತನಾಡುತ್ತಾರೆ.

ಯಾರದ್ದೋ ತೆವಲಿಗೆ, ಯಾರಿಗೋ ನಿದ್ದೆ ಬರದಿದ್ದಕ್ಕೆ ಹಿಂದೆ ಭಾರತದ ವಿಭಜನೆ ಆಯಿತು. ಅಂದಿನ ನಾಯಕತ್ವ ಹೇಡಿತನದ, ದುರ್ಬಲ ವ್ಯಕ್ತಿ ಪ್ರಧಾನಿ ಆಗಬೇಕು ಎಂಬ ಕಾರಣಕ್ಕೆ ದೇಶ ವಿಭಜನೆಗೆ ಸಹಿ ಹಾಕಿತು. ರಾಜಕೀಯವಾಗಿ ಇದನ್ನು ಒಪ್ಪಿದರೂ, ಸಾಂಸ್ಕೃತಿಕವಾಗಿ ಒಪ್ಪಲು ಸಾಧ್ಯವೇ ಇಲ್ಲ. ದೇಶದಿಂದ ಬೇರೆಯಾಗಿರುವ ಭಾಗ ಮುಂದೊಂದು ದಿನ ಮತ್ತೆ ದೇಶದ ತೆಕ್ಕೆಗೆ ಸೇರಲಿಲ್ಲವಾದರೆ ನಾವು ಭಾರತೀಯರೇ ಅಲ್ಲ. ಅದು ಪ್ರೀತಿಯಿಂದ ಆಗಬಹುದು, ಇಲ್ಲಾ ರಾಜಕೀಯವಾಗಿ ಆಗಬಹುದು ಎಂದು ಅವರು ಪ್ರತಿಪಾದಿಸಿದರು. (ಎನ್.ಬಿ)

Leave a Reply

comments

Related Articles

error: