
ಕರ್ನಾಟಕ
ಉಡುಪಿ ಜಿಲ್ಲೆಯಲ್ಲಿ ನಾಲ್ಕೂ ಸ್ಥಳೀಯ ಸಂಸ್ಥೆಗಳು ಬಿಜೆಪಿ ತೆಕ್ಕೆಗೆ
ಉಡುಪಿ (ಸೆ.3): ಉಡುಪಿ ಜಿಲ್ಲೆಯ ನಾಲ್ಕು ನಗರ ಸ್ಥಳೀಯ ಸಂಸ್ಥೆಗಳಿಗೆ ಆಗಸ್ಟ್ 31ರಂದು ನಡೆದ ಚುನಾವಣೆಯ ಫಲಿತಾಂಶ ಪ್ರಕಟಗೊಂಡಿದ್ದು, ನಾಲ್ಕರಲ್ಲೂ ಬಿಜೆಪಿ ಭರ್ಜರಿ ಗೆಲುವು ಸಾಧಿಸಿದೆ. ಇಂದು ನಡೆದ ಮತ ಎಣಿಕೆ ಕಾರ್ಯ ಮುಕ್ತಾಯಗೊಂಡಿದ್ದು, ಉಡುಪಿ ನಗರಸಭೆ, ಕುಂದಾಪುರ ಹಾಗೂ ಕಾರ್ಕಳ ಪುರಸಭೆ ಮತ್ತು ಸಾಲಿಗ್ರಾಮ ಪಟ್ಟಣ ಪಂಚಾಯತ್ಗಳಲ್ಲಿ ಬಿಜೆಪಿ ಅಧಿಕಾರದ ಗದ್ದುಗೆ ಏರಿದೆ.
ಗೆಲುವಿನ ಸ್ಥಾನಗಳು ಹೀಗಿವೆ :
ಉಡುಪಿ ನಗರಸಭೆ: ಬಿಜೆಪಿ 31, ಕಾಂಗ್ರೆಸ್ 4.
ಕಾರ್ಕಳ ಪುರಸಭೆ: ಕಾಂಗ್ರೆಸ್ 11, ಬಿಜೆಪಿ 11, ಪಕ್ಷೇತರ 1.
ಕುಂದಾಪುರ ಪುರಸಭೆ: ಬಿಜೆಪಿ14, ಕಾಂಗ್ರೆಸ್ 8, ಪಕ್ಷೇತರ 1.
ಸಾಲಿಗ್ರಾಮ ಪಟ್ಟಣ ಪಂಚಾಯತ್: ಪಕ್ಷೇತರ 1, ಕಾಂಗ್ರೆಸ್ 5, ಬಿಜೆಪಿ 10.
(ಎನ್.ಬಿ)