ದೇಶಪ್ರಮುಖ ಸುದ್ದಿ

ಗಾಂಧಿ ಹತ್ಯೆ ಸಂಭ್ರಮಿಸಿದವರು ಇಂದು ಅಧಿಕಾರದಲ್ಲಿದ್ದಾರೆ: ನಟಿ ಸ್ವರಾ ಭಾಸ್ಕರ್

ಮುಂಬಯಿ (ಸೆ.3): ರಾಷ್ಟ್ರಪಿತ ಮಹಾತ್ಮಾ ಗಾಂಧೀಜಿಯವರ ಹತ್ಯೆಗೆ ಸಂಭ್ರಮಿಸಿದವರು ಇಂದು ಅಧಿಕಾರದಲ್ಲಿದ್ದಾರೆ ಎಂದು ಹೇಳುವ ಮೂಲಕ ಬಾಲಿವುಡ್‌ ನಟಿ ಸ್ವರಾ ಭಾಸ್ಕರ್‌ ವಿವಾದ ಸೃಷ್ಟಿಸಿದ್ದಾರೆ.

ಎಎನ್‌ಐ ಸುದ್ದಿ ಸಂಸ್ಥೆ ಹಂಚಿಕೊಂಡಿರುವ ವಿಡಿಯೋದಲ್ಲಿ ನಟಿ ಸ್ವರಾ ಅವರು “ಸಮಾಜವು ಜನರನ್ನು ಜೈಲುಗಟ್ಟುವ ರಕ್ತಪೀಪಾಸು ಆಗಬಾರದು’ ಎಂದು ಹೇಳಿರುವುದು ವಿಡಿಯೋದಲ್ಲಿ ಕಂಡು ಬರುತ್ತದೆ. ರಾಷ್ಟ್ರ ರಾಜಧಾನಿ ದಿಲ್ಲಿಯಲ್ಲಿ ಮಾಧ್ಯಮದವರೊಂದಿಗೆ ಸಂವಾದ ನಡೆಸಿದ ನಟಿ ಸ್ವರಾ ಭಾಸ್ಕರ್‌ ಅವರು “ಮಹಾತ್ಮಾ ಗಾಂಧೀಜಿಯವರ ಹತ್ಯೆನ್ನು ಸಂಭ್ರಮಿಸಿದವರೇ ಇಂದು ಅಧಿಕಾರದಲ್ಲಿದ್ದಾರೆ. ಅವರನ್ನೆಲ್ಲ ನಾವು ಜೈಲಿಗೆ ಹಾಕಬೇಕೇ?’ ಎಂದು ಪ್ರಶ್ನಿಸಿದರು.

1980ರ ದಶಕದಲ್ಲಿ ಪಂಜಾಬ್‌ ನಲ್ಲಿ ಭಯೋತ್ಪಾದಕನೆ ತಾಂಡವವಾಡುತ್ತಿತ್ತು. ಆಪರೇಶನ್‌ ಬ್ಲೂ ಸ್ಟಾರ್‌ನಲ್ಲಿ ಹತನಾದ ಭಯೋತ್ಪಾದಕ ಜರ್ನೇಲ್‌ ಸಿಂಗ್‌ ಭಿಂದ್ರನ್‌ವಾಲೆಯನ್ನು ಕೆಲವರು ಸಂತ ಜರ್ನೇಲ್‌ ಎಂದು ಕರೆಯುತ್ತಿದ್ದರು. ಹಾಗಿದ್ದರೂ ಭಿಂದ್ರನ್‌ವಾಲೆಯನ್ನು ಸಂತ ಜರ್ನೇಲ್‌ ಎಂದು ಕರೆದವರನ್ನೆಲ್ಲ ಆಗ ಜೈಲಿಗೆ ಹಾಕಿರಲಿಲ್ಲ’ ಎಂದು ಸ್ವರಾ ಹೇಳಿದರು. (ಎನ್.ಬಿ)

Leave a Reply

comments

Related Articles

error: