ಮೈಸೂರು

ಕಾಯಕವೇ ಕೈಲಾಸವೆಂದು ನಂಬಿದ ಶರಣರು ಅದರಿಂದಲೇ ಸತ್ಯ-ಬೆಳಕನ್ನು ಕಂಡರು : ಡಾ.ಸರೋಜಮ್ಮಣ್ಣಿ

ಮೈಸೂರು,ಸೆ.3 : ಶ್ರೀಶಿವರಾತ್ರೀಶ್ವರ ಧಾರ್ಮಿಕ ದತ್ತಿಯ ಆಶ್ರಯದಲ್ಲಿ ತಿಂಗಳ ಕೊನೆ ಶನಿವಾರದಂದು ನಡೆಯುವ ಶಿವಾನುಭವ ದಾಸೋಹ ಮಾಲಿಕೆಯ 250ನೇ ಕಾರ್ಯಕ್ರಮದಲ್ಲಿ ‘ಶರಣರ ಸಾಮಾಜಿಕ ಚಿಂತನೆ’ ವಿಷಯವಾಗಿ  ಜೆಎಸ್ಎಸ್ ಕಾಲೇಜಿನ ಪ್ರಾಧ್ಯಾಪಕಿ ಡಾ.ಎಂ.ಸಿ.ಸರೋಜಮ್ಮಣ್ಣಿಯವರು ಉಪನ್ಯಾಸ ನೀಡಿದರು.

ಅವರು ಮಾತನಾಡಿ, ಶರಣರ ಸಾಮಾಜಿಕ ಚಿಂತನೆಗಳು ಮನುಷ್ಯರ ವ್ಯಕ್ತಿತ್ವವನ್ನು ಅರಳಿಸುತ್ತದೆ, ಶರಣರು ಕಾಯಕವೇ ಕೈಲಾಸವೆಂದು ನಂಬಿ ಅದರಲ್ಲಿ ಸತ್ಯ ಮತ್ತು ಬೆಳಕನ್ನು ಕಂಡುಕೊಂಡವರು, ಕಾಯಕದಲ್ಲಿ ತಾರತಮವ್ಯ ಮಾಡದೇ ತಮ್ಮ ಹೆಸರುಗಳನ್ನು ಗುರುತಿಸಿಕೊಂಡು ಕಾಯಕಕ್ಕೆ ಹೆಚ್ಚಿನ ಮಹತ್ವವನ್ನು ನೀಡಿದ್ದರು ಎಂದು ತಿಳಿಸಿದರು.

ಕಾಯಕದಲ್ಲಿ ನಿರತನಾದೊಡೆ ಗುರು-ಲಿಂಗ-ಜಂಗಮರನ್ನು ಮರೆಯಬೇಕು ಎಂದು ಶರಣರು ನುಡಿದಂತೆ ನಡೆದಿದ್ದಾರೆ, ಪ್ರತಿಯೊಬ್ಬರು ಆತ್ಮಗೌರವದಿಂದ ಬದುಕಿ ಮುಂದಿನ ಸಮಾಜಕ್ಕೆ ಮಾದರಿಯಾದವರು, ಬಸವಣ್ಣ, ಅಕ್ಕಮಹಾದೇವಿ, ಸೇರಿದಂತೆ ಹಲವು ಶರಣರ ವಚನಗಳಲ್ಲಿ ಕಂಡು ಬರುವ ಸಾಮಾಜಿಕ ಚಿಂತನೆಗಳನ್ನು ಉಲ್ಲೇಖಿಸಿದರು.

ಸಕಲ ಜೀವಾತ್ಮರಿಗೆ ಲೇಸನ್ನು ಬಯಸಿದ ಶರಣರ ವಚನಗಳಲ್ಲಿ ಸಾಹಿತ್ಯಕ, ಸಾಮಾಜಿಕ, ಧಾರ್ಮಿಕ ಚಿಂತನೆಗಳನ್ನು ಕಾಣುತ್ತೇವೆ, ವಚನಗಳು ಲೋಕದ ಜ್ಞಾನವನ್ನು ತಿಳಿಸಿಕೊಡುತ್ತವೆ ಎಂದ ಅವರು ಸಮಾಜ ಜಂಗಮವಾಗಬೇಕೆಂದು ಕರೆ ನೀಡಿದರು.

ಮಾಜಿ ಮಹಾಪೌರ ದಕ್ಷಿಣಾಮೂರ್ತಿ ಅಧ್ಯಕ್ಷತೆ ವಹಿಸಿದ್ದರು, ಶಿವರಾತ್ರಿ ರಾಜೇಂದ್ರ ಕಲಾ ತಂಡದಿಂದ ಭಜನೆ ನಡೆಯಿತು. ದಿವಂಗತ ಕೆ.ಪಿ.ಶಿವಪ್ಪನವರ ಪತ್ನಿ ಶಿವಮ್ಮ ಮತ್ತು ಮಕ್ಕಳು ಕಾರ್ಯಕ್ರಮವನ್ನು ಪ್ರಾಯೋಜಿಸಿದ್ದರು. (ಕೆ.ಎಂ.ಆರ್)

Leave a Reply

comments

Related Articles

error: