ಮೈಸೂರು

ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ ಆರೋಪ : ಎಸ್‌ಡಿಪಿಐ ಕಾರ್ಯಕರ್ತನ ಮೇಲೆ‌ ಚಾಕುವಿನಿಂದ ಹಲ್ಲೆ

ಮೈಸೂರು,ಸೆ.3:- ಕಾಂಗ್ರೆಸ್ ವಿರುದ್ಧ ಕೆಲಸ ಮಾಡಿದ ಆರೋಪದ ಹಿನ್ನೆಲೆಯಲ್ಲಿ  ಕೈ ಕಾರ್ಯಕರ್ತರು ಚಾಕುವಿನಿಂದ ಎಸ್‌ಡಿಪಿಐ ಕಾರ್ಯಕರ್ತನ ಮೇಲೆ‌ ಹಲ್ಲೆ ನಡೆಸಿದ ಘಟನೆ ಮೈಸೂರಿನ ಶಾಂತಿನಗರದ ರಮಚಾ ಮಸೀದಿ ಬಳಿ ನಡೆದಿದೆ.

ನಾಲ್ವರು ಎಸ್‌ಡಿಪಿಐ  ಕಾರ್ಯಕರ್ತರ ಮೇಲೆ ಹಲ್ಲೆ ನಡೆಸಿದ್ದು, ಘಟನೆಯಲ್ಲಿ ಓರ್ವ ಎಸ್‌ಡಿ‌ಪಿಐ ಕಾರ್ಯಕರ್ತನ ಮುಖ ರಕ್ತಸಿಕ್ತವಾಗಿದೆ. ನೂತನ ಪಾಲಿಕೆ ಸದಸ್ಯ ಅಯಾಜ್ ಪಾಷಾ ಬೆಂಬಲಿಗರು ಹಲ್ಲೆ ನಡೆಸಿದ್ದಾರೆಂಬ ಆರೋಪ ಕೇಳಿ ಬಂದಿದೆ. ಉದಯಗಿರಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದ್ದು, ಕೆ.ಆರ್.ಆಸ್ಪತ್ರೆಗೆ ಗಾಯಾಳುಗಳನ್ನು ಚಿಕಿತ್ಸೆಗಾಗಿ ರವಾನಿಸಲಾಗಿದೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: