ಕರ್ನಾಟಕಪ್ರಮುಖ ಸುದ್ದಿ

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬಳಕೆದಾರರ ಶುಲ್ಕ ಕಡಿತ

ಬೆಂಗಳೂರು (ಸೆ.3): ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಕೆದಾರರ ಶುಲ್ಕವನ್ನು ಸೆಪ್ಟೆಂಬರ್ 16ರಿಂದ ಕಡಿತಗೊಳಿಸಲಾಗಿದ್ದು, ಸೆ.16ರಿಂದ ಪರಿಷ್ಕೃತ ಶುಲ್ಕ ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.

ಪ್ರಸ್ತತು ದೇಶಿ ಬಳಕೆದಾರರಿಗೆ 306 ರೂ. ಸಂಗ್ರಹಿಸುತ್ತಿದ್ದು, ಹೊಸ ಶುಲ್ಕ 139 ರೂ. ಆಗಲಿದೆ. ವಿದೇಶಿ ಬಳಕೆದಾರರ ಶುಲ್ಕ 1226 ರಿಂದ 558 ರೂ.ಗೆ ಇಳಕೆಯಾಗಲಿದೆ. ಇದೀಗ ಶುಲ್ಕ ಅರ್ಧದಷ್ಟು ಕಡಿಮೆಯಾಗಿರುವುದರಿಂದ ಏರ್‌ಪೋರ್ಟ್‌ ಬಳಕೆದಾರರಿಗೆ ಸಂತಸ ಉಂಟು ಮಾಡಿದೆ.

ಬಳಕೆದಾರರ ಶುಲ್ಕದ ವಿಚಾರವಾಗಿ ಭಾರತೀಯ ವಿಮಾನ ನಿಲ್ದಾಣಗಳ ಆರ್ಥಿಕ ನಿಯಂತ್ರಣ ಪ್ರಾಧಿಕಾರ ಆದೇಶ ಹೊರಡಿಸಿದೆ. ಇದರ ಅನ್ವಯ ದರ ಇನ್ನೆರೆಡು ವಾರಗಳಲ್ಲಿ ಅಧಿಕೃತವಾಗಿ ಅನುಷ್ಠಾನಗೊಳ್ಳಲಿದೆ ಎಂದು ಮೂಲಗಳು ತಿಳಿಸಿವೆ. ಈ ಸಾಲಿಗೆ ಶುಲ್ಕ ಇಳಿಸಿರುವಂತೆ 2019ರ ಏ.1ರಿಂದ ದೇಶಿ ಹಾಗೂ ವಿದೇಶಿ ಬಳಕೆದಾರರ ಶುಲ್ಕ ಕ್ರಮವಾಗಿ 179 ರೂ ಹಾಗೂ 716ರೂ. ನಿಗದಿಯಾಗಿದೆ.

ಇತ್ತೀಚೆಗೆ ನಡೆದಿದ್ದ ಏರ್‌ಲೈನ್ಸ್ ಬಳಕೆದಾರರ ಸಲಹಾ ಸಮಿತಿ ಸಭೆಯಲ್ಲಿ ಬಳಕೆದಾರ ಶುಲ್ಕ ಕಡಿತದ ಕುರಿತು ನಿರ್ಣಯ ಕೈಗೊಳ್ಳಲಾಗಿದೆ. 2020ರ ಏಪ್ರಿಲ್ 1ರಿಂದ ದೇಶಿ ಬಳಕೆದಾರರ ಶುಲ್ಕ 100ರೂ. ಹಾಗೂ ವಿದೇಶಿ ಬಳಖೆದಾರರ ಶುಲ್ಕ 400 ಆಗಲಿದೆ ಎಂದು ತಿಳಿದುಬಂದಿದೆ.(ಎನ್.ಬಿ)

Leave a Reply

comments

Related Articles

error: