ದೇಶ

ಧೋನಿ ಹೆಸರಿನಲ್ಲಿ ವಂಚನೆ: ವ್ಯಕ್ತಿ ಬಂಧನ

ಪಾಟ್ನ,ಸೆ.3-ಖ್ಯಾತ ಕ್ರಿಕೆಟಿಗರ ಹೆಸರಿನಲ್ಲಿ ವಂಚಿಸುತ್ತಿದ್ದ ಬಿಹಾರದ ವ್ಯಕ್ತಿ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ. ಅಮೆರಿಕಾದಲ್ಲಿ ನೆಲೆಸಿರುವ ಭಾರತೀಯ ಮೂಲದ ಮಹಿಳೆಗೆ ಟೀಂ ಇಂಡಿಯಾದ ಮಾಜಿ ನಾಯಕ ಎಂ.ಎಸ್.ಧೋನಿ ಹೆಸರಿನಲ್ಲಿ ವಂಚಿಸಿದ್ದಾನೆ.

ಜ್ಯೋತಿ ರಂಜನ್ ಬಂಧಿತ ವ್ಯಕ್ತಿ. ಜ್ಯೋತಿ ರಂಜನ್ ಹಾಗೂ ಅಮೆರಿಕಾದಲ್ಲಿ ಉದ್ಯೋಗದಲ್ಲಿರುವ ಭಾರತೀಯ ಮಹಿಳೆ 2016ರಿಂದ ಪರಿಚಯಸ್ಥರಾಗಿದ್ದಾರೆ. ಬಿಹಾರದಲ್ಲಿ ಇಂಟೆಲಿವರ್ ಟೆಕ್ನಾಲಜಿ ಪ್ರವೇಟ್ ಲಿಮಿಟೆಡ್ ಕಂಪೆನಿ ಹೊಂದಿದ್ದು, ಟೀಂ ಇಂಡಿಯಾ ಕ್ರಿಕೆಟಿಗ ಎಂ.ಎಸ್.ಧೋನಿ ಈ ಕಂಪೆನಿಗೆ ರಾಯಭಾರಿ ಎಂದು ಜ್ಯೋತಿ ರಂಜನ್, ಅಮೆರಿಕಾ ಮಹಿಳೆಗೆ ನಂಬಿಸಿದ್ದಾನೆ. ಬಳಿಕ ಸುಮಾರು 60 ಲಕ್ಷ ರೂ. ವಸೂಲಿ ಮಾಡಿದ್ದಾನೆ.

ಜ್ಯೋತಿ ರಂಜನ್ ಈ ರೀತಿ ಹಲವರಿಗೆ ಮೋಸ ಮಾಡಿರುವುದು ತಿಳಿಯುತ್ತಿದ್ದಂತೆ, ಅಮೆರಿಕಾದಲ್ಲಿ ಉದ್ಯೋಗಿಯಾಗಿರುವ ಈ ಮಹಿಳೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. ಪಾಟ್ನಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ತಕ್ಷಣವೇ ಕಾರ್ಯಪ್ರವೃತ್ತರಾದ ಪೊಲೀಸರು ಜ್ಯೋತಿ ರಂಜನ್ ನನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ.

ಪೊಲೀಸರ ವಿಚಾರಣೆ ವೇಳೆ ಹಲವು ಮಾಹಿತಿಗಳು ಹೊರಬಂದಿದ್ದು, ಜ್ಯೋತಿ ರಂಜನ್ ಹೇಳುತ್ತಿರುವ ಕಂಪೆನಿಯೇ ಇಲ್ಲ. ಜೊತೆಗೆ ಎಂ.ಎಸ್.ಧೋನಿ ಸೇರಿದಂತೆ ಬಿಹಾರದ ಇತರ ಕ್ರಿಕೆಟಿಗರ ಹೆಸರಲ್ಲಿ ಹಲವರಿಗೆ ವಂಚನೆ ಮಾಡಿರುವುದು ಬೆಳಕಿಗೆ ಬಂದಿದೆ. (ಎಂ.ಎನ್)

Leave a Reply

comments

Related Articles

error: