ದೇಶಪ್ರಮುಖ ಸುದ್ದಿ

ಉತ್ತರ ಪ್ರದೇಶದಲ್ಲಿ ಮಳೆಯಬ್ಬರ ತೀವ್ರ : ಹದಿನಾರು ಮಂದಿ ಸಾವು

ದೇಶ(ನವದೆಹಲಿ)ಸೆ.3:- ಉತ್ತರ ಪ್ರದೇಶದಲ್ಲಿ ಮಳೆಯಬ್ಬರ ತೀವ್ರಗೊಂಡಿದ್ದು, ಒಂದೇ ದಿನದಲ್ಲಿ ಹದಿನಾರು ಮಂದಿ ಸಾವನ್ನಪ್ಪಿದ್ದಾರೆ.

ಹನ್ನೆರಡಕ್ಕೂ ಅಧಿಕ ಮಂದಿ ಗಾಯಗೊಂಡಿದ್ದು, ಇನ್ನೂ ಎರಡು ದಿನಗಳ ಕಾಲ ಮಳೆ ಮುಂದುವರಿಯಲಿದೆ ಎಂದು ಹವಾಮಾನ ಇಲಾಖೆ ಮುನ್ನೆಚ್ಚರಿಕೆ ನೀಡಿದೆ ಎನ್ನಲಾಗಿದೆ. ಶನಿವಾರ ಸಿಡಿಲಿಗೆ  6ಮಂದಿ ಬಲಿಯಾಗಿದ್ದು, ಏಳು ಮಂದಿ ಗಾಯಗೊಮಡಿದ್ದಾರೆ ಎನ್ನಲಾಗಿದೆ. 18ಕ್ಕೂ ಅಧಿಕ ಜಾನುವಾರುಗಳು ಸಾವನ್ನಪ್ಪಿದ್ದು 481ಕ್ಕೂ ಅಧಿಕ ಮನೆಗಳು ಹಾನಿಗೀಡಾಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. (ಎಸ್.ಎಚ್)

Leave a Reply

comments

Related Articles

error: