ಮೈಸೂರು

ಕೆ.ಆರ್.ಕ್ಷೇತ್ರದ 19ವಾರ್ಡ್ ಗಳಲ್ಲಿ ಹನ್ನೊಂದು ವಾರ್ಡ್ ಬಿಜೆಪಿ ತೆಕ್ಕೆಗೆ : ಕೃತಜ್ಞತೆ ಅರ್ಪಿಸಿದ ಶಾಸಕ ರಾಮದಾಸ್

ಮೈಸೂರು,ಸೆ.3:- ಮೈಸೂರು ಮಹಾ ನಗರ ಪಾಲಿಕೆ ಚುನಾವಣೆ 2018  ರ ಫಲಿತಾಂಶ ಪ್ರಕಟಗೊಂಡಿದ್ದು,  ಕೃಷ್ಣರಾಜ ಕ್ಷೇತ್ರದ ವ್ಯಾಪ್ತಿಗೆ ಬರುವ 19  ವಾರ್ಡ್ ಗಳ ಪೈಕಿ 11  ವಾರ್ಡ್ ಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.  ಕೆ.ಆರ್.ಕ್ಷೇತ್ರದ ಶಾಸಕ ಎಸ್.ಎ.ರಾಮದಾಸ್ ಮತದಾರರಿಗೆ ಕೃತಜ್ಞತೆಗಳನ್ನು ಅರ್ಪಿಸಿದ್ದಾರೆ.

ಈ ಕುರಿತು ಮಾಧ್ಯಮ ಹೇಳಿಕೆ ನೀಡಿರುವ ಅವರು ಈ ಬಾರಿ ಮೈಸೂರು ಮಹಾನಗರ ಪಾಲಿಕೆ ಚುನಾವಣೆಯು ಬಹಳ  ಗೊಂದಲಗಳಿಂದ ಕೂಡಿದ್ದು ಇದರಲ್ಲಿ ಬಹುಮುಖ್ಯವಾಗಿ, ಅವೈಜ್ಞಾನಿಕವಾಗಿ ಮಾಡಲಾದ ವಾರ್ಡ್ ಗಳ   ಪುನರ್ವಿಂಗಡಣೆ, ಮತದಾರರ ಪಟ್ಟಿಯಲ್ಲಿ ಒಂದೇ ಮನೆಯ ಮತದಾರರ ಹೆಸರನ್ನು ಬೇರೆ ಬೇರೆ ವಾರ್ಡಿನಲ್ಲಿ ಸೇರಿಸಿರುವುದು, ಕೆ ಆರ್ ಕ್ಷೇತ್ರದಲ್ಲಿ 14 ವಾರ್ಡ್ ಗಳಲ್ಲಿ ಮಹಿಳಾ ಮೀಸಲಾತಿ   ವಾರ್ಡ್ ಆಗಿ ಮಾರ್ಪಡಿಸಿದ್ದು, ಹಿಂದುಳಿದ್ದ ವರ್ಗಕ್ಕೆ 7 , ಪರಿಶಿಷ್ಟ ಜಾತಿಗೆ 2 ,ಪರಿಶಿಷ್ಟ ಪಂಗಡ 1 , ಜನರಲ್ 4  ಕ್ಕೆ ನಿಗದಿ ಪಡಿಸಿ ಹಲವಾರು ಗೊಂದಲಗಳನ್ನು ನಿರ್ಮಿಸಸಲಾಗಿತ್ತು. ಆದರೂ ಕೂಡ  ಚುನಾವಣೆಯಲ್ಲಿ ಕ್ಷೇತ್ರದ ಮತದಾರರು ಬಿಜೆಪಿಯನ್ನು ಅತಿ ಹೆಚ್ಚಿನ ವಾರ್ಡ್ ಗಳಲ್ಲಿ  ಗೆಲ್ಲಿಸಿದ್ದಾರೆ ಎಂದರಲ್ಲದೇ, ಚುನಾವಣೆಯಲ್ಲಿ ಆಯ್ಕೆಯಾದ ಎಲ್ಲಾ ಪಾಲಿಕೆ  ಸದಸ್ಯರುಗಳನ್ನು ಅಭಿನಂದಿಸಿದ್ದಾರೆ. ಕೃಷ್ಣರಾಜ ಕ್ಷೇತ್ರವನ್ನು ಮಾದರಿ ಕ್ಷೇತ್ರವನ್ನಾಗಿಸಲು ಪಕ್ಷಭೇದವಿಲ್ಲದೆ ಒಟ್ಟಾಗಿ ಕೆಲಸ ಮಾಡುವಂತೆ  ಮನವಿ ಮಾಡಿದ್ದಾರೆ. (ಕೆ.ಎಸ್,ಎಸ್.ಎಚ್)

Leave a Reply

comments

Related Articles

error: