ಮೈಸೂರು

ಎರಡನೇ ದಿನಕ್ಕೆ ಕಾಲಿರಿಸಿದ ಪ್ರತಿಭಟನೆ

ರಾಜ್ಯ ಸರಕಾರ ಕಲಾವಿದರಿಗೆ ಯಾವುದೇ ಪರಿಹಾರ ಧನ ಅಥವಾ ನಿವೃತ್ತ ವೇತನದ ಸೌಲಭ್ಯ ನೀಡುತ್ತಿಲ್ಲ. ಕೂಡಲೇ ಸರಕಾರ ಈ ಬಗ್ಗೆ ಕ್ರಮ ಕೈಗೊಂಡು ಕಲಾವಿದರಿಗೆ ಸೂಕ್ತ ಪರಿಹಾರ ಒದಗಿಸಬೇಕು ಎಂದು ಕಲಾವಿದರು ಪ್ರತಿಭಟನೆ ಕೈಗೊಂಡಿದ್ದು ಎರಡನೇ ದಿನಕ್ಕೆ ಕಾಲಿರಿಸಿದೆ.

ಶುಕ್ರವಾರವೂ  ರಂಗಾಯಣದ ವನರಂಗದಲ್ಲಿ ಕಲಾವಿದರು ತಮ್ಮ ಪ್ರತಿಭಟನೆ ಮುಂದುವರಿಸಿದ್ದಾರೆ. ಮೊನ್ನೆಯಷ್ಟೇ ನಿಧನರಾದ ಮಂಜುನಾಥ ಬೆಳಕೆರೆ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಿ, ರಂಗಾಯಣದ ಸಿಬ್ಬಂದಿ ದಿ.ಪುಟ್ಟಯ್ಯ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಿ, ರಂಗಾಯಣದ ಕಲಾವಿದ ಬಸವರಾಜ ಕೊಡಗೆ ಅವರ ಕುಟುಂಬಕ್ಕೆ ಆರ್ಥಿಕ ಭದ್ರತೆ ನೀಡಿ ಎಂಬ ಫಲಕಗಳನ್ನು ಕೈಯ್ಯಲ್ಲಿ ಹಿಡಿದು ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ನೂರಾರು ಕಲಾವಿದರು ಪಾಲ್ಗೊಂಡಿದ್ದರು.

Leave a Reply

comments

Related Articles

error: