ಮನರಂಜನೆ

ಸೆಪ್ಟೆಂಬರ್ ಮೂರನೇ ವಾರ ‘ದಿ ವಿಲನ್’ ತೆರೆಗೆ?

ರಾಜ್ಯ(ಬೆಂಗಳೂರು)ಸೆ.3:- ಚಂದನವನದ ಚಿತ್ರ ನಿರ್ದೇಶಕ ಪ್ರೇಮ್ ನಿರ್ದೇಶನದ, ಹ್ಯಾಟ್ರಿಕ್ ಹಿರೋ, ಕಿಚ್ಚ ಸುದೀಪ್ ಅಭಿನಯದ ‘ ದಿ ವಿಲನ್’ ಸೆಪ್ಟೆಂಬರ್ ಮೂರನೇ ವಾರದಲ್ಲಿ ತೆರೆ ಕಾಣುವ ಸಾಧ್ಯತೆಯಿದೆ ಎನ್ನಲಾಗಿದೆ.

ನಿರ್ದೇಶಕ ಪ್ರೇಮ್ ಸೆಪ್ಟೆಂಬರ್ ನಲ್ಲಿ ಚಿತ್ರ ತೆರೆ ಕಾಣಲಿದೆ ಎಮದು ಟ್ವೀಟರ್ ನಲ್ಲಿ ಬರೆದುಕೊಂಡಿದ್ದು,  ಚಿತ್ರ ತೆರೆ ಕಾಣುವ ಒಂದು ವಾರಕ್ಕೂ ಮೊದಲೇ ಟಿಕೇಟ್ ನೀಡಲು ಕೌಂಟರ್ ತೆರೆಯಲಿದೆಯಂತೆ.ದಿ ವಿಲನ್ ಚಿತ್ರದ ಮೇಲೆ ಅಭಿಮಾನಿಗಳು ಬಹಳವಾಗಿಯೇ ನಿರೀಕ್ಷೆಯನ್ನಿಟ್ಟುಕೊಂಡಿದ್ದು, ಇಬ್ಬರು ದಿಗ್ಗಜ ನಟರ ಅಭಿನಯ ಚಿತ್ರವನ್ನು ಇನ್ನಷ್ಟು ಕಳೆಗಟ್ಟಿಸಲಿದೆ ಎನ್ನಲಾಗಿದೆ. ಈಗಾಗಲೇ ದಿ ವಿಲನ್ ಮೇನಿಯಾ ಆರಂಭವಾಗಿದ್ದು,ಚಿತ್ರಕ್ಕೆ ಎ ಸರ್ಟಿಫಿಕೇಟ್ ಕೂಡ ದೊರೆತಾಗಿದೆಯಂತೆ. (ಎಸ್.ಎಚ್)

Leave a Reply

comments

Related Articles

error: