ಮೈಸೂರು

ನಾಳೆಯಿಂದ ದಿ.9ರವರೆಗೆ ನಗರದಲ್ಲಿ ಪೌರಾಣಿಕ ರಂಗೋತ್ಸವ

ಮೈಸೂರು,ಸೆ.3 : ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಪ್ರಯೋಜಕತ್ವದಲ್ಲಿ ರೇಣುಕಾ ಕಲಾ ವೃಂದ ಮೈಸೂರು ಇವರ ವಾರ್ಷಿಕೋತ್ಸವದ ಅಂಗವಾಗಿ ಪೌರಾಣಿಕ ರಂಗೋತ್ಸವವನ್ನು ಸೆ.4 ರಿಂದ 9ರವರೆಗೆ ಪುರಭವನದಲ್ಲಿ ಏರ್ಪಡಿಸಲಾಗಿದೆ.

ಶಾಸಕ ಸಾ.ರಾ.ಮಹೇಶ್ ಉದ್ಘಾಟಿಸುವರು, ಕಿರಗಸೂರು ಸಂಗೀತ ವಿದ್ವಾಂಸ ರಾಜಪ್ಪ ಅಧ‍್ಯಕ್ಷತೆ ವಹಿಸುವರು, ಮೇಲುಕೋಟೆ ವೆಂಗೀಪುರ ನಂಬಿಮಠದ ಶ್ರೀ ಇಳೈ ಆಳ್ವಾರ್ ಸ್ವಾಮೀಜಿ ಸಾನಿಧ‍್ಯ ವಹಿಸುವರು ಹಲವು ಹಿರಿಯ ಕಲಾವಿದರು ಹಾಜರಿರುವರು.

ಸೆ.5ರಂದು ಬೆಳಗ್ಗೆ 11.30ಕ್ಕೆ ‘ದಕ್ಷ ಯಜ್ಞ’ ನಾಟಕ ಪ್ರದರ್ಶನ, ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡ ಉದ್ಘಾಟಿಸುವರು. ರಾಜ್ಯ ನೌಕರರ ಸಂಘದ ಅಧ‍್ಯಕ್ಷ ಹೆಚ್.ಕೆ.ರಾಮು ಅಧ್ಯಕ್ಷತೆ ವಹಿಸುವರು ಹಲವು ಮುಖಂಡರು ಭಾಗಿಯಾಗುವರು.

ಸೆ.7ರ ಬೆಳಗ್ಗೆ 11.30ಕ್ಕೆ ಹೊಸರಾಮನಹಳ್ಳಿಯ ಹಿರಣ್ಯೇಶ್ವರ ಕೃಪಾ ಪೋಷಿತ ನಾಟಕ ಮಂಡಳಿಯಿಂದ ‘ಸತ್ಯಮೂರ್ತಿ ಅಥವಾ ಮಾನವೇಂದ್ರನ ಗರ್ವಭಂಗ’ ನಾಟಕ ಪದರ್ಶನ, ಜೆಡಿಎಸ್ ರಾಜ್ಯಾಧ‍್ಯಕ್ಷ ಅಡಗೂರು ಹೆಚ್.ವಿಶ್ವನಾಥ್, ಶಾಸಕ ಅನಿಲ್ ಚಿಕ್ಕಮಾಧು ಹಾಗೂ ಇತರರು ಇರುವರು.

ಶಾಸಕ ನಾಗೇಂದ್ರ ಅವರಿಂದ ಸೆ.8ರಂದು ಮಧ‍್ಯಾಹ್ನ 12 ಗಂಟೆಗೆ ಪ್ರದರ್ಶಿತಗೊಳ್ಳುವ ‘ಮನ್ಮಥ ವಿಜಯ ಅಥವಾ ಶಂಭರಾಸುರನ ವಧೆ’ ನಾಟಕದ ಉದ್ಘಾಟನೆ, ಶಾಸಕ ಎಸ್.ಎ.ರಾಮದಾಸ್ ಅಧ್ಯಕ್ಷತೆ ವಹಿಸುವರು.

ಸೆ.9ರಂದು ಬೆಳಗ್ಗೆ 11.30ಕ್ಕೆ ‘ಕುರುಕ್ಷೇತ್ರ’ ನಾಟಕ ಪ್ರದರ್ಶನವನ್ನು ಜಿ.ಟಿ.ಹರೀಶ್ ಗೌಡ ಉದ್ಘಾಟಿಸಲಿದ್ದಾರೆ. (ಕೆ.ಎಂ.ಆರ್)

 

Leave a Reply

comments

Related Articles

error: