ಸುದ್ದಿ ಸಂಕ್ಷಿಪ್ತ

ನಾಳೆಯಿಂದ ಸೆ.11ರವರೆಗೆ ಬಾಯಿ ಮತ್ತು ವಸಡಿನ ತಪಾಸಣಾ ಶಿಬಿರ

ಮೈಸೂರು,ಸೆ.3 : ಲಲಿತಾದ್ರಿಪುರ ರಸ್ತೆಯ ಜೆಎಸ್ಎಸ್ ಆಯುರ್ವೇದ ಆಸ್ಪತ್ರೆ ವತಿಯಿಂದ ನಾಳೆಯಿಂದ ಸೆ.11ರವರೆಗೆ ಬೆಳಗ್ಗೆ 9 ರಿಂದ ಸಂಜೆ 4ರವರೆಗೆ ಬಾಯಿ ಹಾಗೂ ವಸಡಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.

ಶಿಬಿರದಲ್ಲಿ ಬಾಯಿಯ ಹುಣ್ಣು, ವಸಡಿನ ತೊಂದರೆಗಳು, ಹಲ್ಲಿನ ಆರೋಗ್ಯ, ನಾಲಿಗೆ ಸಮಸ್ಯೆ, ಬಾಯಿಯ ದುರ್ನಾತ ಹಾಗೂ ತಂಬಾಕು ಸೇವನೆಯಿಂದ ಉಂಟಾಗುವ ಸಮಸ್ಯೆಯ ಬಗ್ಗೆ ತಪಾಸಣೆ ಹಾಗೂ ಸಲಹೆ ಲಭ್ಯವಿದೆ.

ನೊಂದಾಯಿಸಿಕೊಳ್ಳಲು ದೂ.ಸಂ. 0821 2548231, 2548433 ಅನ್ನು ಸಂಪರ್ಕಿಸಬಹುದು. (ಕೆ.ಎಂ.ಆರ್)

Leave a Reply

comments

Related Articles

error: