ಮೈಸೂರು

ದೇಶ ಕಟ್ಟುವ ಸಾಮರ್ಥ್ಯ ಯುವಕರ ಕೈಲಿದೆ : ಶಾಸಕ ವಾಸು

ಯುವ ಹಾಗೂ ಕ್ರೀಡಾ ಸಚಿವಾಲಯ, ನೆಹರೂ ಯುವ ಕೇಂದ್ರ, ಕಾಲೇಜು ಶಿಕ್ಷಣ ಇಲಾಖೆ, ರಾಷ್ಟ್ರೀಯ ಸೇವಾ ಯೋಜನೆ ಇವರ ಸಂಯುಕ್ತಾಶ್ರಯದಲ್ಲಿ ಶುಕ್ರವಾರ ಮೈಸೂರಿನ ಮಹಾರಾಣಿ ಮಹಿಳಾ ಕಲಾ ಕಾಲೇಜಿನಲ್ಲಿ  2017 ನೇ ಗಣರಾಜ್ಯೋತ್ಸವದ  ಅಂಗವಾಗಿ ‘ದೇಶಪ್ರೇಮ ಹಾಗೂ ರಾಷ್ಟ್ರ ನಿರ್ಮಾಣ’ ಕುರಿತು ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಯ ಉದ್ಘಾಟನಾ ಸಮಾರಂಭವನ್ನು ಏರ್ಪಡಿಸಲಾಗಿತ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಚಾಮರಾಜ ಕ್ಷೇತ್ರದ ಶಾಸಕ ವಾಸು, ಅಂದಿನ ರಾಜರ ದೂರದೃಷ್ಟಿತ್ವದ ಫಲವಾಗಿ ಮಹಾರಾಣಿ ಕಾಲೇಜು ಸ್ಥಾಪನೆಯಾಯಿತು. ಇಂದಿಗೆ ಸುಮಾರು 100 ವರ್ಷಗಳು ಕಳೆದಿವೆ. ಅಂದು ಕೇವಲ 20 ವಿದ್ಯಾರ್ಥಿನಿಯರಿಂದ ಪ್ರಾರಂಭವಾದ ಈ ಸಂಸ್ಥೆ ಇಂದು ವಿವಿಧೆಡೆಯಿಂದ ವಿದ್ಯಾರ್ಥಿನಿಯರು ಬಂದು ಸೇರುವ ಮೂಲಕ ದೊಡ್ಡ ಶಿಕ್ಷಣ ಸಂಸ್ಥೆಯಾಗಿ ಬೆಳೆದಿದೆ ಎಂದು ಹೇಳಿದರು.

ಪ್ರಸ್ತುತ ಸಮಾಜಕ್ಕೆ ಇಂತಹ ಭಾಷಣ ಸ್ಪರ್ಧೆಗಳ ಅವಶ್ಯಕತೆ ಇದೆ. ಜಿಲ್ಲಾ ಮಟ್ಟದಲ್ಲಿ  ಜಯ ಸಾಧಿಸಿ  ರಾಷ್ಟ್ರ ಮಟ್ಟಕ್ಕೆ ಆಯ್ಕೆಯಾಗಿ ಯಶಸ್ಸು ಸಾಧಿಸಲಿ ಎಂದರಲ್ಲದೇ, ಭಾಷಣಗಳು ಕೇವಲ ಭಾಷಣಗಳಾಗಿ ಉಳಿಯದೆ ಅವುಗಳನ್ನು ನಮ್ಮ ಪ್ರವೃತ್ತಿಯಲ್ಲಿ ರೂಢಿಸಿಕೊಳ್ಳಬೇಕು. ದೇಶ ಕಟ್ಟುವ ಸಾಮರ್ಥ್ಯ ಯುವಕರ ಕೈಯಲ್ಲಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

ಪ್ರಪಂಚದಲ್ಲಿ ಯುವಕರಿಗೆ ಸಾಕಷ್ಟು ಅವಕಾಶಗಳಿದ್ದು, ದೇಶದ ಅತ್ಯುನ್ನತ ಸ್ಥಾನವನ್ನು ಅಲಂಕರಿಸಿ. ಕೇವಲ ಅಧಿಕಾರಿಗಳಾಗದೇ ಸಾಮಾಜಿಕ ಮತ್ತು ರಾಜಕೀಯ ಕ್ಷೇತ್ರದಲ್ಲಿ ತೊಡಗಿಸಿಕೊಂಡು ದೇಶ ಸೇವೆ ಮಾಡಿ ಎಂದು ಸಲಹೆ ನೀಡಿದರು.

ಪ್ರಾಸ್ತಾವಿಕ ನುಡಿಗಳನ್ನಾಡಿದ ನೆಹರೂ ಯುವ ಕೇಂದ್ರದ ಜಿಲ್ಲಾ ಯವ ಸಂಯೋಜಕರಾದ ಎಂ.ಎನ್. ನಟರಾಜ್, ಜಿಲ್ಲಾ ಮಟ್ಟ, ರಾಜ್ಯ ಮಟ್ಟ ಮತ್ತು ರಾಷ್ಟ್ರ ಮಟ್ಟದಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಇಂದು 185 ಜಿಲ್ಲೆಗಳಲ್ಲಿ ಈ ಸ್ಪರ್ಧೆ ನಡೆಯುತ್ತಿದೆ. ಉಳಿದ ಜಿಲ್ಲೆಗಳಲ್ಲಿ ಈಗಾಗಲೇ ಸ್ಪರ್ಧೆ ನಡೆದಿದೆ. ಒಟ್ಟು 626 ಜಿಲ್ಲೆಗಳಲ್ಲಿ ಈ ಸ್ಪರ್ಧೆ ನಡೆಯುತ್ತದೆ. ಸರ್ಕಾರಿ ಸೇವೆಗಳಲ್ಲಿರುವವರು ಸಹ  ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಾಗಿದೆ. ಯುವಕರಲ್ಲಿ ದೇಶಾಭಿಮಾನ ವೃದ್ಧಿ ಮಾಡಲು ಇಂತಹ ಹೊಸ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ ಎಂದರು.

ಕಾಲೇಜು ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕ ರಘೋತ್ತಮ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಪ್ರಾಂಶುಪಾಲ ವಿಜಯ್, ಕಾರ್ಯಕ್ರಮದ ಸಂಯೋಜಕ ಚಂದ್ರಶೇಖರ್, ಪ್ರಸನ್ನಕುಮಾರ್ ಮತ್ತಿತರರು ಉಪಸ್ಥಿತರಿದ್ದರು

Leave a Reply

comments

Related Articles

error: