
ಮೈಸೂರು
ಡಿ.25 : ಪ್ರಾತ್ಯಕ್ಷಿಕೆ ಕಾರ್ಯಕ್ರಮ
ಶ್ರೀ ಉಪನಿಷತ್ ಯೋಗ ಕೇಂದ್ರ ಟ್ರಸ್ಟ್ ಹಾಗೂ ಸ್ವರಾಲಯ ಸಂಗೀತ ಸಂಸ್ಥೆಯ ಜಂಟಿ ಆಶ್ರಯದಲ್ಲಿ ಡಿ.25 ರಂದು ಬೆಳಿಗ್ಗೆ 10.30 ಕ್ಕೆ ಶ್ರೀ ಉಪನಿಷತ್ ಯೋಗ ಕೇಂದ್ರದಲ್ಲಿ ಪ್ರಾತಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸ್ವರಾಲಯ ಸಂಗೀತ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸುಮ ಹರಿನಾಥ್ ಹೇಳಿದರು.
ಶುಕ್ರವಾರ ಮೈಸೂರಿನ ಪತ್ರಕರ್ತರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಡಾ.ಎಸ್.ಗೀತಾ ಭಾಗವಹಿಸಲಿದ್ದಾರೆ. ಯೋಗದಿಂದ ರೋಗ ಮುಕ್ತಿ ಎಂಬ ಕಾರ್ಯಕ್ರಮವನ್ನು ಶ್ರೀ ಉಪನಿಷತ್ ಯೋಗ ಕೇಂದ್ರದ ಸಂಸ್ಥಾಪಕ ಹಾಗೂ ನಿರ್ದೇಶಕ ಸುಧೇಶ್ ಚಂದ್ ನಡೆಸಿಕೊಡಲಿದ್ದಾರೆ. ಸಂಗೀತದ ಉಗಮ ಕಾರ್ಯಕ್ರಮವನ್ನು ಸಂಗೀತ ಸಂಸ್ಥೆಯ ಕಾರ್ಯದರ್ಶಿ ಹೆಚ್.ಎಸ್. ಶ್ರೀಕಾಂತಾಮಣಿ ಅವರು ನಡೆಸಿಕೊಡುತ್ತಾರೆ. ಯಾವ ರೋಗಕ್ಕೆ ಯಾವ ರಾಗ ಎಂಬುದನ್ನು ಸ್ವರಾಲಯ ಸಂಗೀತ ಸಂಸ್ಥೆಯ ಸಂಸ್ಥಾಪಕಿ ಮತ್ತು ನಿರ್ದೇಶಕಿ ಸುಮ ಹರಿನಾಥ್ ತಿಳಿಸಿಕೊಡಲಿದ್ದಾರೆ ಎಂದು ಮಾಹಿತಿ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ನ ಪದಾಧಿಕಾರಿಗಳಾದ ಸುಧೇಶ್ ಚಂದ್, ಶ್ರೀಕಾಂತಾಮಣಿ, ಮಹೇಶ್ ಮತ್ತು ಕೋಮಲ ಹಾಜರಿದ್ದರು.